ADVERTISEMENT

ಮುದ್ದುಮರಿಗಳ ಕ್ಯಾಟ್‌ವಾಕ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಚಿತ್ರಗಳು: ಎಸ್‌.ಕೆ. ದಿನೇಶ್‌
ಚಿತ್ರಗಳು: ಎಸ್‌.ಕೆ. ದಿನೇಶ್‌   

ಅದೊಂದು ಫ್ಯಾಷನ್‌ ಶೋ. ಬಳುಕುವ ರೂಪದರ್ಶಿಯರ ಬಳಸಿ ನಡೆಯುತ್ತಿದ್ದ ಮುದ್ದುಮರಿಗಳು ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದವು. ಒಬ್ಬಾಕೆ ಧರಿಸಿದ್ದ ಹಸಿರು ಬಣ್ಣದ ಉಡುಗೆ ಮೇಲೆ ಹಳದಿ ಎಲೆಯ ಚಿತ್ತಾರ. ಇನ್ನೊಬ್ಬಾಕೆ ತೊಟ್ಟಿದ್ದ ಉಡುಗೆಯಲ್ಲಿ ಕೆಂಪು, ನೀಲಿ, ಬಿಳಿ ಬೆರೆತಿದ್ದ ವಿನ್ಯಾಸ. ಬಿಳಿಯುಡುಗೆ ಧರಿಸಿ ಮಿಂಚುತ್ತಿದ್ದ ಆಕೆಯ ಕೈಗಳಲ್ಲಿದ್ದ ನಾಯಿಮರಿಯೂ ಅಚ್ಚ ಬಿಳುಪು.

ಬೀದಿನಾಯಿಗಳ ಸಂರಕ್ಷಣೆಗಾಗಿ ದುಡಿಯುತ್ತಿರುವ ‘ಕ್ಯೂಪಾ’ ಸಂಸ್ಥೆಯು ಭಾನುವಾರ ಹೋಟೆಲ್ ಲಲಿತ್ ಅಶೋಕದಲ್ಲಿ ಆಯೋಜಿಸಿದ್ದ ಫ್ಯಾಷನ್‌ ಶೋಗೆ ಪ್ರಸಾದ್ ಬಿದಪ್ಪ ಅವರ ಪ್ರತಿಭೆಯ ಸ್ಪರ್ಶ ಸಿಕ್ಕಿತ್ತು. ಮಾತುಬಾರದ ಮೂಕಪ್ರಾಣಿಗಳಿಗೆ ಪ್ರೀತಿ- ಸಹಾನುಭೂತಿ ತೋರಲು ಫ್ಯಾಷನ್ ಶೋ ಸಹ ಒಂದು ಸಾಧನವಾಗಿ ಒದಗಿಬಂದಿತ್ತು.

ಮಾತು, ಸಂಗೀತ, ಸುಂದರಿಯರ ಬೆಡಗು, ಚಿಕ್ಕಮಕ್ಕಳ ಚಿಣ್ಣಾಟದಲ್ಲಿ ನಾಯಿಗಳೂ ನಲಿದವು. ರಾಕ್‌ಸ್ಟಾರ್ ಆಗುವ ಕನಸು ನನಸು ಮಾಡಿಕೊಳ್ಳಲೆಂದು ಆಗಸದಲ್ಲಿ ಸದಾ ಹಾರುವ ಅವಕಾಶ ಬಿಟ್ಟುಕೊಟ್ಟ ಬೆಹ್ರಾಮ್ ಸಿಗಾನ್‌ಪೋರಿಯಾ ಅವರ ರಾಕ್‌ ಸಂಗೀತ ನೆರೆದವರನ್ನು ರಂಜಿಸಿತು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ನಿಧಿಯನ್ನು ಕ್ಯೂಪಾದ ನೂತನ ಪ್ರಾಣಿ ಸ್ವೀಕಾರ ಕೇಂದ್ರ ನಿರ್ಮಾಣಕ್ಕೆ ಬಳಕೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.