ADVERTISEMENT

ಮೋಜಿನ ಕಾಮಿಕ್ ಕಾನ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST

ಕಾಮಿಕ್ ಕಾನ್ ಇಂಡಿಯಾ ನೇತೃತ್ವದಲ್ಲಿ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎರಡು ದಿನಗಳ `ಕಾಮಿಕ್ ಕಾನ್ 2013' ನಡೆಯಿತು. ವಿವಿಧ ನಮೂನೆಯ ಉಡುಗೆ ತೊಡುಗೆ ಧರಿಸುವುದು, ಅಂತರರಾಷ್ಟ್ರೀಯ ಪಾಲ್ಗೊಳ್ಳುವಿಕೆ, ಕಾರ್ಯಾಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುಸ್ತಕ ಪ್ರದರ್ಶನ, ಹಾಸ್ಯ, ಮನರಂಜನೆ, ಅನಿಮೇಶನ್, ವಿಜ್ಞಾನ, ಗೇಮಿಂಗ್ ಮತ್ತಿತರ ಕಾರ್ಯಕ್ರಮಗಳು ಮಕ್ಕಳನ್ನು ರಂಜಿಸಿದವು.

ಬಾಲಿವುಡ್ ನಟ ಕುನಾಲ್ ಕಪೂರ್ (ಕೆಳಗಡೆ ಕೊನೆಯ ಚಿತ್ರ) ಮಿಂಟ್ರಾ ಡಾಟ್‌ಕಾಮ್‌ನ ಮಾರಾಟ ಮಳಿಗೆಗೆ ಭೇಟಿ ನೀಡಿದ್ದು ಕಾರ್ಯಕ್ರಮದ ಹೈಲೈಟ್. ಮಕ್ಕಳು ತಮ್ಮ ನೆಚ್ಚಿನ ಕಾರ್ಟೂನ್ ಮತ್ತು ಕಾಮಿಕ್ಸ್ ಪಾತ್ರಧಾರಿಗಳಂತೆ ವೇಷ ಧರಿಸಿ ಎಲ್ಲರನ್ನೂ ರಂಜಿಸಿದರು.

`ಪ್ರತಿಯೊಂದು ವಿಭಾಗದ ಆಟಗಳಲ್ಲಿ ಗೆದ್ದವರಿಗೆ ಗೋವಾ ಪ್ರವಾಸದ ಅವಕಾಶ ಸಿಗಲಿದೆ. ಅಲ್ಲದೇ ವಿವಿಧ ಶಿಬಿರಗಳಲ್ಲಿ ಅನ್ವೇಷಣೆಗಳ ಬಗ್ಗೆ ಹೆಚ್ಚಿನ  ಮಾರ್ಗದರ್ಶನ ನೀಡಲಾಗುವುದು' ಎಂದು ಕಾಮಿಕ್ ಕಾನ್ ಇಂಡಿಯಾದ ಸಂಸ್ಥಾಪಕ ಜತಿನ್ ವರ್ಮಾ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.