ADVERTISEMENT

ಯುಗಾದಿಗೆ ಸಂಸಾರದಲ್ಲಿ ಸರಿಗಮ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ನಂದನ ಸಂವತ್ಸರವನನ್ನು ನಗುನಗುತ್ತ ಸ್ವಾಗತಿಸಲು ಯಶಸ್ವಿ ಕಲಾವಿದರ ತಂಡ ಸಜ್ಜಾಗಿದೆ. ಶುಕ್ರವಾರ `ಸಂಸಾರದಲ್ಲಿ ಸರಿಗಮ~ ಹಾಸ್ಯ ನಾಟಕ. ನಟ ನಿರ್ದೇಶಕ, ಸರಿಗಮ ವಿಜಿ ಹಾಗೂ ಉಮಾಶ್ರೀ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಈಗಾಗಲೇ 1290 ಪ್ರದರ್ಶನಗಳನ್ನು ಕಂಡಿರುವ ಈ ನಾಟಕದಿಂದಲೇ ವಿಜಿ ಅವರ ಹೆಸರಿಗೆ ಸರಿಗಮ ಸೇರ್ಪಡೆಯಾಯಿತು.

ನಾಟಕದ 291ನೇ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
 
ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹಾಗೂ ಗಾಯತ್ರಿ ರೆಡ್ಡಿ ಬೇವು ಬೆಲ್ಲ ವಿತರಿಸುವರು. ವಿನಾಯಕ ಕನ್ಸ್‌ಟ್ರಕ್ಷನ್ಸ್ನ್ ರಾಮಲಿಂಗಪ್ಪ, ಭಾವನಾ ಎಂಟರ್‌ಪ್ರೈಸಸ್‌ನ ಯು.ಆರ್.ಎನ್.ಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದರ್ಶನ್, ನೀತು, ಪ್ರಣೀತ ಹಾಗೂ ರೂಪಶ್ರೀ ಈ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದ್ದಾರೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.15.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.