ADVERTISEMENT

ರಾಜ್‌ಕುಮಾರ್ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:30 IST
Last Updated 22 ಏಪ್ರಿಲ್ 2011, 19:30 IST

ಮಿರ್ಚಿಯಲ್ಲಿ ತದ್ರೂಪಿ
ರೇಡಿಯೋ ಮಿರ್ಚಿ 98.3 ಎಫ್ ಎಂ ಈ ಬಾರಿ  ಡಾ. ರಾಜ್ ಕುಮಾರ್ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಿದೆ.

ಅದು ಈ ಒಂದು ವಾರ ರಾಜ್‌ಕುಮಾರ್ ಅಭಿನಯದ ಚಿತ್ರಗಳ ಮಧುರ ಹಾಡುಗಳು ಮತ್ತು ಸಂಭಾಷಣೆಯನ್ನು ಕೇಳುಗರಿಗೆ ಉಣಬಡಿಸಲಿದೆ.

ಅಲ್ಲದೆ ಕನ್ನಡ ಸಿನಿಮಾ ರಂಗಕ್ಕೆ ರಾಜ್ ಕೊಡುಗೆಯನ್ನು ಸ್ಮರಿಸಿ ರಾಜ್‌ಕುಮಾರ್ ‘ತದ್ರೂಪಿ’ ಸ್ಪರ್ಧೆ ಹಮ್ಮಿಕೊಂಡಿದೆ. ರಾಜ್ ಅವರನ್ನು ಹೋಲುವ ವ್ಯಕ್ತಿಗಳು  ತಮ್ಮ  ಭಾವಚಿತ್ರಗಳನ್ನು ರೇಡಿಯೋ ಮಿರ್ಚಿ ವೆಬ್‌ಸೈಟ್‌ಗೆ (www.radiomirchi.comಗೆ ) ಅಪ್‌ಲೋಡ್ ಮಾಡಬಹುದು. ವಿಜೇತರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು.

ಕುಮಾರ್ ಕಲ್ಚರಲ್ ಅಕಾಡೆಮಿ:  ಭಾನುವಾರ ಮಧ್ಯಾಹ್ನ 2ಕ್ಕೆ ಡಾ. ರಾಜ್ ನುಡಿನಮನ ಹಾಗೂ ಎನ್‌ಎಸ್‌ಎನ್ ಶರ್ಮಾ ಅವರಿಂದ ಮ್ಯಾಜಿಕ್  ಶೋ. ಸಂಜೆ 6ಕ್ಕೆ ಕುಮಾರ್ ಕಲ್ಚರಲ್ ಅಕಾಡೆಮಿ ಉದ್ಘಾಟನೆ ಹಾಗೂ ಡಾ.ರಾಜ್‌ಕುಮಾರ್ ಜಯಂತಿ ಆಚರಣೆ.

ನಂತರ ಹಿರಿಯ ಕಲಾವಿದ ಬೆಂಗಳೂರು ನಾಗೇಶ್ ಅವರಿಗೆ ಸನ್ಮಾನ. ಸಂಜೆ 7ಕ್ಕೆ ‘ನಿರುದ್ಯೋಗವೇ ಮಹಾಭಾಗ್ಯ’ ನಗೆ ನಾಟಕ. ಅಧ್ಯಕ್ಷತೆ: ಡಾ.ಚಿಕ್ಕಹೆಜ್ಜಾಜಿ ಮಹದೇವ್. ಅತಿಥಿಗಳು: ಪ್ರೊ.ಬಿ.ನಾರಾಯಣಮ್ಮ.

ಸ್ಥಳ: ಕನ್ನಡ ಯುವಜನ ಸಂಘ, ನಂ.1 ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ.

ವಾರ್ತಾ ಇಲಾಖೆ: ಭಾನುವಾರ ಡಾ.ರಾಜ್ ಜನ್ಮದಿನಾಚರಣೆ. ಡಾ. ಚಂದ್ರಶೇಖರ ಕಂಬಾರ ಅವರಿಂದ ವಿಶೇಷ ಉಪನ್ಯಾಸ. ಉದ್ಘಾಟನೆ: ಬಿ.ಎಸ್.ಯಡಿಯೂರಪ್ಪ. ಅತಿಥಿಗಳು: ಆರ್.ಅಶೋಕ್, ಎಸ್.ಕೆ.ನಟರಾಜ್, ಅನಂತ ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.

ರಂಗ ಜಂಗಮ: ಶನಿವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-4 ಸಾಕ್ಷ್ಯಚಿತ್ರ ಪ್ರದರ್ಶನ. ಮಧ್ಯಾಹ್ನ 1.30ಕ್ಕೆ ‘ರವಿಚಂದ್ರ’, ಸಂಜೆ 6ಕ್ಕೆ ‘ಶಬ್ದವೇದಿ’ ಚಲನಚಿತ್ರ ಪ್ರದರ್ಶನ. ಭಾನುವಾರ ಬೆಳಿಗ್ಗೆ 11ಕ್ಕೆ ‘ಡಾ.ರಾಜ್ ಜೀವನಧಾರೆ’ ಮೇರು ನಟ ನಡೆದು ಬಂದ ದಾರಿ ಭಾಗ-5. ಮಧ್ಯಾಹ್ನ 1.30ಕ್ಕೆ ‘ಹೊಸ ಬೆಳಕು’, ಸಂಜೆ 6ಕ್ಕೆ ‘ಕಸ್ತೂರಿ ನಿವಾಸ’ ಚಿತ್ರ ಪ್ರದರ್ಶನ. ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್. ಬಿಬಿಎಂಪಿ ಎದುರು.

ಕವಿಗೋಷ್ಠಿ

ಸುನಂದ ಸಾಹಿತ್ಯ ವೇದಿಕೆ: ಭಾನುವಾರ 39ನೇ ಗೋಷ್ಠಿ ಹಾಗೂ ರಾಜ್ ಜನ್ಮದಿನೋತ್ಸವ ಮೆಲುಕು ಕವಿಗೋಷ್ಠಿ. ರಾಜ್ ಚಿತ್ರಗಳ ತುಣುಕು ಪ್ರದರ್ಶನ, ಚಿತ್ರಗೀತೆಗಳ ಗಾಯನ.
ಸ್ಥಳ: ವಲ್ಲಭ ನಿಕೇತನ, ಶಿವಾನಂದ ವೃತ್ತ ಬಳಿ. ಬೆಳಿಗ್ಗೆ 10.30. ಹೆಸರು ನೋಂದಣಿಗೆ: 99809 58670.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.