ADVERTISEMENT

ರೆಸ್ಟೊರೆಂಟ್ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಮುಂಬೈ, ದೆಹಲಿಯ ಯಶಸ್ಸಿನ ನಂತರ ರೆಸ್ಟೊರೆಂಟ್ ಸಪ್ತಾಹ ಬೆಂಗಳೂರಿಗೆ ಬರುತ್ತಿದೆ. ಸೆ.19ರಿಂದ 25ರವರೆಗೆ ನಡೆಯಲಿರುವ ಈ ಸಪ್ತಾಹದಲ್ಲಿ ಬೆಂಗಳೂರಿನ ಪ್ರಖ್ಯಾತ ರೆಸ್ಟೊರೆಂಟ್‌ಗಳ ಪ್ರಸಿದ್ಧ ಬಾಣಸಿಗರು ಸಿದ್ಧಪಡಿಸಿದ ಸ್ವಾದಿಷ್ಟ ಊಟ, ತಿಂಡಿ ವಿಶೇಷ ಖಾದ್ಯಗಳನ್ನು 1 ಸಾವಿರ ರೂ ದರದಲ್ಲಿ ಸವಿಯವ ಅವಕಾಶ ಲಭ್ಯ.

ಎಂ ಜಿ ರಸ್ತೆ ಒಬೆರಾಯ್ ಹೋಟೆಲ್‌ನ ಶೆಜ್ವಾನ್ ಕೋರ್ಟ್ ಮತ್ತು ಲಿ ಜಾರ್ಡಿನ್, ದಿ ಲೀಲಾ ಪ್ಯಾಲೇಸ್‌ನ ಜೆನ್, ಶೆರಟಾನ್ ಬೆಂಗಳೂರು ಹೋಟೆಲ್‌ನ ಬೆನ್, ಇಷ್ಟಾ ಹೋಟೆಲ್‌ನ ದಿ ಪಿಂಕ್ ಪೊಪಾಡಂ, ಅಶೋಕ ನಗರದ ಆಲಿವ್ ಬೀಚ್ ಹಾಗೂ ಡಿಕನ್ಸ್‌ನ್ ರಸ್ತೆಯಲ್ಲಿರುವ ಕ್ಯಾಪರ್‌ಬೆರ‌್ರಿ ಈ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿವೆ. ಗ್ರಾಹಕರು ಬಯಸಿದಲ್ಲಿ ವಿದೇಶಿ ವೈನ್ ಜತೆ ಊಟ ಸವಿಯಬಹುದು. www.restaurantweekindia.com  ಮೂಲಕ ಟೇಬಲ್ ಕಾಯ್ದಿರಿಸಬಹುದು.

ರಂಗಶಂಕರದಲ್ಲಿ ಓಣಂ
ಜೆಪಿ ನಗರ 2ನೇ ಹಂತದ ರಂಗ ಶಂಕರ ಕೆಫೆಯಲ್ಲಿ ಭಾನುವಾರ ಮಧ್ಯಾಹ್ನ 1ರಿಂದ 3 ರವರೆಗೆ  ಓಣಂ ಅಂಗವಾಗಿ ಕೇರಳದ ಸಾಂಪ್ರದಾಯಿಕ ಭರ್ಜರಿ  `ಓಣಂ ಸದ್ಯ~  ಭೋಜನ ಸವಿಯಬಹುದು.

ರಂಗ ಶಂಕರ ಕೆಫೆ ನಡೆಸುತ್ತಿರುವ ಅಂಜು ಸುದರ್ಶನ್ ಅವರು ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ತಯಾರುಮಾಡಿದ್ದಾರೆ. ಮಾಹಿತಿಗೆ: 99000 64931.

ಶಾಹಿ ದಸ್ತಾರ್‌ಖ್ವಾನ್
ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಈಗ ರಾಜ ಮಹಾರಾಜರು ಸೇವಿಸುತ್ತಿದ್ದ ರಾಜ ವೈಭೋಗದ ವಿಶೇಷ ತಿನಿಸುಗಳ `ಶಾಹಿ ದಸ್ತಾರ್‌ಖ್ವಾನ್~ ಆಹಾರ ಮೇಳ ನಡೆಸುತ್ತಿದೆ.

ಇಲ್ಲಿ ಸೆ. 11ರ ವರೆಗೂ ಮೊಘಲ್‌ನಿಜಾಂ, ರಜಪೂತ್ ಮತ್ತು ಕಾಶ್ಮೀರಿ ರಾಜ ಶೈಲಿಯ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಮೆಲ್ಲಬಹುದು. ಕಾಶ್ಮೀರಿಗಳು `ಡಿಷ್ ಆಫ್ ಕಿಂಗ್ಸ್~ ಎಂದೇ ಕರೆಯುವ ಗುಶ್ತಾಬಾ ಈ ಮೇಳದ ಪ್ರಮುಖ ಆಕರ್ಷಣೆ. ಇದು ಮೊಸರಿನಿಂದ ತಯಾರಿಸಿದ ಗ್ರೇವಿಯಲ್ಲಿ ಅದ್ದಿದ (ಪೌಂಡೆಡ್ ಮೀಟ್) ಮಾಂಸದ ಈ ವಿಶೇಷ ತಿನಿಸು ತನ್ನ ಸ್ವಾದ ಮತ್ತು ರುಚಿಗೆ ಪ್ರಸಿದ್ಧವಾಗಿದೆ.

ಮಾಹಿ ಶುರ್ಕ್ ಕುರ್ಮಾ, ಕಚ್ಚೇ ಗೋಷ್ಟ್ ಕೀ ಬಿರ್ಯಾನಿ, ದಮ್ ಕಾ ಮುರ್ಘ್, ರಜಪೂತರ ನೆಚ್ಚಿನ ಅಡುಗೆ ಸಸ್ಯಾಹಾರಿ ದಹಿ ಕೇ ಶೋಲೆ ಮತ್ತು ಧಿಂಗ್ರಿ ಖಾಸ್‌ಗಳನ್ನು ಮೆಲ್ಲುತ್ತ ಟಕೀಲಾ, ವೈಟ್ ರಮ್ ಮತ್ತು ದ್ರಾಕ್ಷಿ ರಸದ ವಿಶೇಷ ಮಿಶ್ರಣ `ಗುಸ್ತಾಕಿ ಮಾಫ್~ ಎಂಬ ವಿಶಿಷ್ಟ ಪಾನೀಯ ಸೇವಿಸಿದರೆ ಅದರ ಸವಿಯೇ ಬೇರೆ. ಸ್ಥಳ: ಇಂದಿರಾನಗರ, ಕೋರಮಂಗಲ ಮತ್ತು ಜೆಪಿ ನಗರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.