ADVERTISEMENT

ಲೈಫ್ ಈಸ್ ನೌ ಟೈಟನ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಮಹಿಳಾ ದಿನದ ಅಂಗವಾಗಿ ಟೈಟಾನ್ ಕೈಗಡಿಯಾರ ಸಮೂಹವು ಮಹಿಳೆಯರಿಗಾಗಿ `ಲೈಫ್ ಈಸ್ ನೌ~ ಎಂಬ ವಿಶೇಷ ಸ್ಪರ್ಧೆ ಆಯೋಜಿಸಿದೆ.

ಮಹಿಳೆಯರು ತಮ್ಮ ಬದುಕಿನಲ್ಲಿ ನಡೆದ ಅವಿಸ್ಮರಣೀಯ ಅನುಭವಗಳು, ಸಾಹಸಮಯವೆನಿಸುವ ಕತೆಗಳಾಗುವ ಅನುಭವಗಳನ್ನು ನೂರು ಪದಗಳಲ್ಲಿ ಬರೆದು ಕಳುಹಿಸಬೇಕು.

ಆಯ್ಕೆಯಾದ ಮೂವರು ವಿಜೇತರಿಗೆ `ಟೈಟಾನ್ ರಾಗ~ ಕೈಗಡಿಯಾರ ಗೆಲ್ಲುವ ಅವಕಾಶವನ್ನು ಸಂಸ್ಥೆ ನೀಡಿದೆ.

ವಿಡಿಯೋ ಹಾಗೂ ಫೋಟೊಗಳನ್ನೂ ಕಳುಹಿಸಲು ಅವಕಾಶವಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲೂ ಬರೆದು ಕಳುಹಿಸಬಹುದು. ಸ್ಪರ್ಧೆಗೆ ಬುಧವಾರ (ಮಾ.7) ಕಡೆಯ ದಿನ.
ಇ ಮೇಲ್:lifeisnow.titan@gmail.com
ಹೆಚ್ಚಿನ ಮಾಹಿತಿಗೆ: 99720 66555

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.