ADVERTISEMENT

ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:30 IST
Last Updated 18 ಫೆಬ್ರುವರಿ 2011, 19:30 IST

~ಇಂದ್ರಚಾಪ’, ಉಪಾಸನಾ
ಲಹರಿ ರೆಕಾರ್ಡಿಂಗ್ ಕಂಪೆನಿ:
  ಶನಿವಾರ ಡಾ.ಜಿಎಸ್. ಶಿವರುದ್ರಪ್ಪ ಅವರಿಂದ ಗಾಯಕ ಉಪಾಸನಾ ಮೋಹನ್ ಸಂಗೀತ ನಿರ್ದೇಶನದಲ್ಲಿ ಪ್ರಸಿದ್ಧ ಕವಿಗಳ 250 ಕವಿತೆಗಳ ‘ಇಂದ್ರಚಾಪ’ ಭಾವಗೀತೆಗಳ ಸಿ.ಡಿ ಮತ್ತು 250 ಕವಿತೆಗಳ ಸಂಗ್ರಹ ‘ಉಪಾಸನಾ’ ಕೃತಿ ಲೋಕಾರ್ಪಣೆ. ನಂತರ ವಿವಿಧ ಗಾಯಕರು, ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್, ಉಪಾಸನಾ, ಸೃಜನ ಸಂಗೀತ ಶಾಲೆ ಹಾಗೂ ಶಾರದ ಗಾನಕಲಾ ಮಂದಿರದ ಮಕ್ಕಳಿಂದ ಭಾವಗೀತೆ. ನಮಿತಾ ಶಂಕರ್ ತಂಡದಿಂದ ಭಾವನೃತ್ಯ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.

ಮೋಜಿಗಾಗಿ ಇಂಗ್ಲಿಷ್
ಭಾಗ್ಯಲಕ್ಷ್ಮಿ ಪ್ರಕಾಶನ: ಭಾನುವಾರ ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ ಅವರಿಂದ ಡಾ. ಉದಯರವಿ ಶಾಸ್ತ್ರಿಯವರ ‘SAVVY ಇಂಗ್ಲಿಷ್ ಸವಿ’ ಮತ್ತು ‘ಮೋಜಿಗಾಗಿ ಇಂಗ್ಲಿಷ್’ ಎರಡು ಸಂಪುಟಗಳು ಹಾಗೂ ಗೋಪಾಲಕೃಷ್ಣ ಪೈ ಅವರ ‘ಮೂರು ಮತ್ತಿಷ್ಟು’ ಕೃತಿಗಳ ಲೋಕಾರ್ಪಣೆ. ಕೃತಿ ಕುರಿತು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಎಸ್.ಆರ್. ವಿಜಯ ಶಂಕರ್.
ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಸಂಜೆ 6.

ಚಿಲುಮೆ, ಹುಚ್ಚ ದೇವನಾದ
ನಿಜದ ಪ್ರಕಾಶನ: ಶನಿವಾರ  ಜರಗನಹಳ್ಳಿ ಶಿವಶಂಕರ್ ಅವರಿಂದ ಆರ್. ಸದಾಶಿವಯ್ಯ ಜರಗನಹಳ್ಳಿ ಅವರ ‘ಚಿಲುಮೆ’ (ಕವನ ಸಂಕಲನ) ಮತ್ತು ‘ಹುಚ್ಚ ದೇವನಾದ’ ಕಿರು ಕಾದಂಬರಿ ಲೋಕಾರ್ಪಣೆ. ನಂತರ ಚುಟುಕು ಕವಿಗೋಷ್ಠಿ.
 ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಸಂಜೆ 5.

ಆಗಿಂದಾಗ್ಗೆ
ಧಾತ್ರಿ ಪುಸ್ತಕ, ಸಂವೇದನ: ಭಾನುವಾರ ಬಿ.ಆರ್. ಲಕ್ಷ್ಮಣರಾವ್ ಬರೆದಿರುವ ‘ಆಗಿಂದಾಗ್ಗೆ’ ಕೃತಿ ಲೋಕಾರ್ಪಣೆ. ಅತಿಥಿಗಳು: ಜೋಗಿ, ಎಂ.ಎಸ್. ಶ್ರೀರಾಮ್. ಅಧ್ಯಕ್ಷತೆ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ.
ಸ್ಥಳ: ವರ್ಲ್ಡ್ ಕಲ್ಚರ್ ಸೆಂಟರ್, ಗಾಂಧಿ ಬಜಾರ್. ಬೆಳಿಗ್ಗೆ 10.30.

ಇಂಡಿಯ ಕಾಲಿಂಗ್
ಹಾರ್ಪರ್  ಕಾಲಿನ್ಸ್: ಸೋಮವಾರ ಆನಂದ್ ಗಿರಿಧರದಾಸ್ ಬರೆದಿರುವ ‘ಇಂಡಿಯಾ ಕಾಲಿಂಗ್’ ಕೃತಿ ಲೋಕಾರ್ಪಣೆ. ನಂತರ ಲೇಖಕರ ಜತೆ ಶೋಭಾ ಡೇ ಸಂವಾದ.
ಸ್ಥಳ: ಫೋರಂ ಮಾಲ್, ಕೋರಮಂಗಲ. ಸಂಜೆ 6.30.

ಶ್ರೀ ಗಾಯತ್ರಿ
ಬೆಂಗಳೂರು ವಕೀಲರ ಸಂಘ: ಶನಿವಾರ ಕೆ.ಎನ್. ಪುಟ್ಟೇಗೌಡ ಅವರಿಂದ ‘ಶ್ರೀ ಗಾಯತ್ರಿ; ಕೃತಿ ಲೋಕಾರ್ಪಣೆ, ಹಿರಿಯ ವಕೀಲರಿಗೆ ಸನ್ಮಾನ. ಸ್ಥಳ: ವಕೀಲರ ಭವನ, ನಗರ ವಿಭಾಗ. ಮಧ್ಯಾಹ್ನ 1.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.