ADVERTISEMENT

ವನಿತಾ ಚಿತ್ರ ಪಲ್ಲಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST
ವನಿತಾ ಚಿತ್ರ ಪಲ್ಲಟ
ವನಿತಾ ಚಿತ್ರ ಪಲ್ಲಟ   

ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ವಾಸಿಸುವ ಹೆಣ್ಣು ಮಕ್ಕಳು ಇವತ್ತು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಲ್ಲಿಸುತ್ತಿದ್ದಾರೆ.

ಇವತ್ತಿನ ದಿನದಲ್ಲಿ  ಹೆಣ್ಣು ಟ್ಯಾಕ್ಸಿ ಡ್ರೈವರ್ ಆಗಿ, ವಕೀಲೆಯಾಗಿ, ಸಿನಿಮಾ ನಿರ್ದೇಶಕಿಯಾಗಿ, ಉದ್ಯಮಿಯಾಗಿ ಹೀಗೆ ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತೆರೆದುಕೊಂಡಿದ್ದಾಳೆ. ಇಂತಹ ಅಪರೂಪದ ಸಾಧನೆ ಮಾಡುತ್ತಿರುವ ಅಮೂಲ್ಯ ಚಿತ್ರಗಳನ್ನು ನೋಡುವ ಅವಕಾಶ ಈಗ ನಗರಿಗರದ್ದು.

`ವಿಮೆನ್ ಚೇಂಜಿಂಗ್ ಇಂಡಿಯಾ~ ಎಂಬ ವಿಷಯವನ್ನಿಟ್ಟುಕೊಂಡು ಮ್ಯಾಗ್ನಂ ಫೋಟೊ ಏಜೆನ್ಸಿ ಅಪರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.

ಖ್ಯಾತ ಛಾಯಾಚಿತ್ರಕಾರರಾದ ಮಾರ್ಟಿನ್ ಫ್ರಾಂಕ್, ಅಲೆಕ್ಸ್ ವೆಬ್, ಪ್ರತೀಕ್, ಅಲೆಸ್ಸಾಂಡ್ರಾ, ಒಲಿವಿಯಾ ಆರ್ಥರ್ ಮತ್ತು ರಘು ರೈ ಅವರ ಚಿತ್ರಗಳು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಾಳೆಯಿಂದ ಅ.20ರವರೆಗೆ ಪ್ರದರ್ಶನಗೊಳ್ಳಲಿವೆ.

ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಹೆಣ್ಣಿನ ಪಾತ್ರ, ಆಕೆಯಲ್ಲಿ ಅಡಗಿರುವ ಮಹತ್ವಾಂಕಾಕ್ಷೆ, ಸಿಕ್ಕುವ ಅವಕಾಶಗಳನ್ನು ಬಳಸಿಕೊಂಡು ಏರುತ್ತಿರುವ ಎತ್ತರ ಹೀಗೆ ದೇಶದಲ್ಲಿ ಬದಲಾದ ಹೆಣ್ಣು ಮಕ್ಕಳ ಚಿತ್ರಣವನ್ನು ಸಕಾರಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.
 
ಈ ಛಾಯಾಚಿತ್ರಕಾರರು ತೆಗೆದಿರುವ ಅಪರೂಪದ ಚಿತ್ರಗಳು ಹೆಣ್ಣು ಮಕ್ಕಳ ಬದಲಾವಣೆಯ ಮುಖವನ್ನು ವಿವಿಧ ಮಜಲುಗಳಲ್ಲಿ ತೆರೆದಿಡುತ್ತದೆ. 

ಸ್ಥಳ: ಕರ್ನಾಟಕ ಚಿತ್ರ ಕಲಾ ಪರಿಷತ್ತು, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10.30ರಿಂದ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.