ADVERTISEMENT

ವರ್ಣಮಯ ಹಣತೆಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಮನೆಯ ಮನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಉಂಟುಮಾಡುವ ದೀಪಾವಳಿಗೆ ಮನೆ ಮನೆಗಳಲ್ಲಿ ದೀಪಗಳನ್ನು ಹಚ್ಚಿ ಸಿಂಗರಿಸುವುದು ವಿಶೇಷ. ಅದಕ್ಕಾಗಿ ಮಾರುಕಟ್ಟೆ, ಬೀದಿ ಬದಿಗಳಲ್ಲಿ ದೀಪಗಳ ಮಾರಾಟ ಭರಾಟೆ. ಅದಕ್ಕೆ ಪೂರಕವಾಗಿ ಈ ಬಾರಿ `ವರ್ಣ~ ಕರಕುಶಲ ಮಳಿಗೆಯಲ್ಲಿ ಅ. 27ರ ವರೆಗೂ ಬಗೆಬಗೆಯ ದೀಪ, ಹಣತೆಗಳ `ದೀಪೋತ್ಸವ~ ಮಾರಾಟ ಮತ್ತು ಪ್ರದರ್ಶನ ನಡೆಯುತ್ತಿದೆ.

ಇಲ್ಲಿ ಗಾಜಿಯಾಬಾದ್, ಪಾಣಿಪತ್, ಮುರಾದಾಬಾದ್, ದೆಹಲಿ, ಗೋರಖ್‌ಪುರಗಳಿಂದ ತರಿಸಿದ ಆಕರ್ಷಕ ದೀಪಗಳು ಮನಸೆಳೆಯುತ್ತವೆ.

ರಾಜ್ಯದ ಕಲಾವಿದರೇ ತಯಾರಿಸಿದ 5ಅಡಿ ಎತ್ತರದ ಮಣ್ಣಿನ ದೀಪಗಳು ಈ ಬಾರಿಯ ಹೈಲೆಟ್. ಜೊತೆಗೆ ಎರಡೂವರೆ ಅಡಿಯ ಹಿತ್ತಾಳೆ ದೀಪಗಳು ಅತ್ಯಾಕರ್ಷವಾಗಿವೆ. 100 ರೂನಿಂದ ಆರಂಭವಾಗಿ ರೂ 800 ವರೆಗಿನ ಹಿತ್ತಾಳೆ ದೀಪಗಳು ಇಲ್ಲಿವೆ.

3 ರೂಪಾಯಿಯಿಂದ ಮೂರು ಸಾವಿರ ರೂಗಳ ವರೆಗಿನ ಮಣ್ಣಿನ ದೀಪಗಳು ಲಭ್ಯ. ಗಣೇಶ, ಲಕ್ಷ್ಮಿ, ಆನೆಯ ವಿನ್ಯಾಸದ ಮಣ್ಣಿನ ದೀಪಗಳ ಜೊತೆಗೆ ಗೋಡೆಗೆ ನೇತುಹಾಕುವ, ಬಾಗಿಲು ತೋರಣಗಳು ಕಣ್ಮನ ಸೆಳೆಯುತ್ತಿವೆ. 

ಬಗೆಬಗೆಯ ಮೇಣದ ದೀಪಗಳು, ಸುವಾಸನೆ ಬೀರುವ, ನೀರಿನಲ್ಲಿ ತೇಲಿಬಿಡುವ ಸಣ್ಣ ದೀಪಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಮಾಲೀಕ ಅರುಣ್.

ಸ್ಥಳ: ನಂ97/3, ಈಸ್ಟ್ ಪಾರ್ಕ್ ರಸ್ತೆ, 9ನೇ ಕ್ರಾಸ್, ಪೋಸ್ಟ್ ಆಫೀಸ್ ಹಿಂಭಾಗ, ಮಲ್ಲೇಶ್ವರಂ. ಬೆಳಿಗ್ಗೆ 11ರಿಂದ ರಾತ್ರಿ 8. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.