ADVERTISEMENT

ವರ್ಷಿಣಿಯ ಕಥಾಕೀರ್ತನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಗರುಡ ನಾಟ್ಯ ಸಂಘ: ಮಂಗಳವಾರ ಕಥಾಕೀರ್ತನಗಾರ್ತಿ ವರ್ಷಿಣಿ ವಿಜಯ್ ಅವರಿಂದ `ಧನುರ್ಭಂಜನ~ ಕಥಾಕೀರ್ತನ. ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ಅಜ್ಜ ಪ್ರೊ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಥಾ ಕೀರ್ತನದಲ್ಲಿ ತರಬೇತಿ ಪಡೆದಿದ್ದಾರೆ.

ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಕಾರ್ಯಕ್ರಮ ನೀಡಿದ್ದಾರೆ.ಈಗ ಹೊಸ ತಲೆಮಾರಿನ ಯುವಕ- ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನ ರೀತಿಯ ಕಥಾ ವಿವರಣೆಯ ಮೂಲಕ `ಧನುರ್ಭಂಜನ~ ಕೀರ್ತನೆ ನೀಡಲಿದ್ದಾರೆ.
 
ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆ.
ಅತಿಥಿಗಳು: ನಿರುಪಮಾ ಮತ್ತು ರಾಜೇಂದ್ರ, ವಿಮಲಾ ಸಿ. ಪದ್ಮನಾಭರಾವ್, ಮಿನಿರಾಜು.

ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ
(ಹಳೆ ಎನ್‌ಎಸ್‌ವಿಕೆ ಶಾಲೆ ಆವರಣ) 7 ನೇ ಹಂತ, ಜಯನಗರ. ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.