
ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಇತ್ತೀಚೆಗೆ ಎರಡನೇ ವಾರ್ಷಿಕೋತ್ಸವ ಮತ್ತು 7ನೇ ಕಾಲೇಜು ದಿನ `ಸ್ಪೆಕ್ಟ್ರಾ 2012~ ಆಚರಿಸಿತು. ನಟ ತಿಲಕ್ ಮತ್ತು ನಟಿ ನಿಶಾ ಶೆಟ್ಟಿ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿತ್ತು.
ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಚೇರ್‌ಮನ್ ಎ.ಸಿ ಷಣ್ಮುಗನ್ ಈ ವರ್ಷ ವೈದ್ಯರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವೈದ್ಯ ವೃತ್ತಿ ಜಗತ್ತಿನ ಅತಿ ಪುರಾತನವಾದದ್ದು.
ಈ ವೃತ್ತಿಯು ಅತಿ ಹೆಚ್ಚು ಕಷ್ಟಕರವಾದರೂ ಮಾನವೀಯ ಕೆಲಸ. ಅದೇ ನಿಮಗೆ ಸಂತೋಷದಾಯಕವೂ ಆಗಿದೆ. ಇದೊಂದು ಕರ್ತವ್ಯ~ ಎಂದು ಸಲಹೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಹುಲುವಡಿ ಜಿ. ರಮೇಶ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಸಂಸತ್ ಕಲಾಪಗಳ ಸಚಿವ ವಿ. ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ವಿದ್ಯಾರ್ಥಿಗಳು ಸಮೂಹ ನೃತ್ಯ, ಸಮೂಹ ಗಾಯನ ಮತ್ತು ನಾಟಕಗಳು ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ರಂಗೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.