ADVERTISEMENT

ವಿದೇಶಿ ವಿದ್ಯಾರ್ಥಿಗಳ ಮಿರಿಯಾಡ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜು ಆಯೋಜಿಸಿದ್ದ `ಮಿರಿಯಾಡ್~ ಕಾರ್ಯಕ್ರಮದ ತುಂಬೆಲ್ಲಾ ವಿದೇಶಿ ವಿದ್ಯಾರ್ಥಿಗಳ ಕಲರವ. ಈ ಕಾರ್ಯಕ್ರಮ ಹಲವು ದೇಶಗಳ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲು ಅವಕಾಶ ಕಲ್ಪಿಸಿಕೊಟ್ಟಿತು.

ಬೇರೆ ಬೇರೆ ದೇಶಗಳಿಂದ ಬಂದು ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ತಾಯ್ನೆಲದ ಪರಂಪರೆಯನ್ನು ಇಲ್ಲಿ ಪ್ರದರ್ಶಿಸಿದ್ದು ಮತ್ತೊಂದು ವಿಶೇಷ. ಮಾರಿಷಿಯಸ್, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ ಹಾಗೂ ಭೂತಾನ್‌ನಿಂದ ಬಂದಿರುವ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಫ್ಯೂಷನ್ ಡ್ಯಾನ್ಸ್, ಕಾಂಗೋ ವಿದ್ಯಾರ್ಥಿಗಳು ಹಾಡಿದ ಅವರ ದೇಶದ ಮಧುರ ಗೀತೆಗಳು ಎಲ್ಲರ ಮನಸೆಳೆದವು.

ಇದರ ಜೊತೆಗೆ ಶ್ರಿಲಂಕಾ, ಭೂತಾನ್, ಟಿಬೆಟ್, ನೇಪಾಳದ ವಿದ್ಯಾರ್ಥಿಗಳು ತಮ್ಮ ದೇಶದ ಶ್ರೀಮಂತ ಪರಂಪರೆಯಾದ ಜಾನಪದ ನೃತ್ಯ ಪ್ರದರ್ಶನ ನೀಡಿ ಎಲ್ಲರನ್ನು ರಂಜಿಸಿದರು. ಅಂತರರಾಷ್ಟ್ರೀಯ ಪ್ರದರ್ಶನಗಳಿಗೆ ಪೂರಕವಾಗುವಂತೆ, ಭಾರತದ ವಿದ್ಯಾರ್ಥಿಗಳು ಕೂಡ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
 
ಗುಜರಾತಿ, ರಾಜಸ್ತಾನಿ ಹಾಗೂ ದೇಸಿ ನೃತ್ಯ ಹಾಗೂ ಗಾಯನಗಳೊಂದಿಗೆ ನೆರೆದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಇದೆಲ್ಲಕ್ಕಿಂತ ಮುಖ್ಯವಾಗಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮ ಎಲ್ಲರ ಮನಗೆದ್ದಿತು.

ಸಮಕಾಲೀನ ನೃತ್ಯ, ಬೀಟ್ ಬಾಕ್ಸಿಂಗ್, ನೃತ್ಯ ನಾಟಕ ಹಾಗೂ ಸಮೂಹ ನೃತ್ಯಗಳು ಎಲ್ಲರನ್ನು ರಂಜಿಸಿದವು. ಕಾರ್ಯಕ್ರಮದ ಕೊನೆಯಲ್ಲಿ ಪ್ರದರ್ಶನಗೊಂಡ ಜುಗಲ್‌ಬಂದಿ ಸಂಗೀತ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.