ADVERTISEMENT

ವಿದ್ಯಾರ್ಥಿ ಆಯ್ಕೆ ಹಬ್ಬ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST
ವಿದ್ಯಾರ್ಥಿ ಆಯ್ಕೆ ಹಬ್ಬ
ವಿದ್ಯಾರ್ಥಿ ಆಯ್ಕೆ ಹಬ್ಬ   

ಐರ್ಲೆಂಡ್‌ನಲ್ಲಿನ ಉನ್ನತ ಶಿಕ್ಷಣದ ಅವಕಾಶವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಸಲುವಾಗಿ ಐರ್ಲೆಂಡ್‌ನ ಸರ್ಕಾರಿ ಸಂಸ್ಥೆಯಾಗಿರುವ ಎಜ್ಯುಕೇಷನ್ ಐರ್ಲೆಂಡ್ ಶ್ರಮಿಸುತ್ತಿದೆ. ಸಂಸ್ಥೆ ಇದೇ ಉದ್ದೇಶವನ್ನಿರಿಸಿಕೊಂಡು ಈಚೆಗೆ ನಗರಕ್ಕೂ ಆಗಮಿಸಿತ್ತು. 

ಹೊಟೇಲ್ ಒಬೆರಾಯ್‌ನಲ್ಲಿ ಆಯೋಜಿಸಿದ್ದ `ವಿದ್ಯಾರ್ಥಿ ಆಯ್ಕೆ ಹಬ್ಬ'ದಲ್ಲಿ ಐರ್ಲೆಂಡ್‌ನ 16 ಮುಂಚೂಣಿ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಡೀನ್‌ಗಳೂ ಸೇರಿದಂತೆ 60ಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರು. ಈ ಹಬ್ಬ ಐರಿಷ್‌ನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಇಲ್ಲಿನವರಿಗೆ ಪ್ರದರ್ಶಿಸಿತು. ವಿಶ್ವವಿದ್ಯಾನಿಲಯ ಮತ್ತು ಕೈಗಾರಿಕೆ ಸಂಬಂಧ, ವಿದ್ಯಾರ್ಥಿ ವೇತನ, ಸುಲಭ ವೀಸಾ, ಉದ್ಯೋಗ ಭದ್ರತೆ ಮತ್ತು ಇತರೆ ವಿಚಾರಗಳನ್ನು ಈ ಹಬ್ಬ ಒಳಗೊಂಡಿತ್ತು.

`ಐರ್ಲೆಂಡ್ ಶಿಕ್ಷಣ ಇಲಾಖೆ ಭಾರತದೊಂದಿಗೆ ನಾನಾ ವಿಧಗಳಲ್ಲಿ ಅತ್ಯುತ್ತಮ ಸಂಬಂಧ ಹೊಂದಿದೆ. ಮಂತ್ರಿಗಳ ನೇತೃತ್ವದ ಶಿಕ್ಷಣ ಸಮಿತಿ ಭಾರತಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಗುಣಮಟ್ಟದ ಶಿಕ್ಷಣ, ಉದ್ಯೋಗವಕಾಶಗಳು ಐರ್ಲೆಂಡ್‌ನಲ್ಲಿವೆ' ಎಂದರು ಐರ್ಲೆಂಡ್ ಶಿಕ್ಷಣ ಸಚಿವ ಸಿಯರನ್ ಕನನ್. ಇದೇ ವೇಳೆ ಮಂತ್ರಿಗಳ ನೇತೃತ್ವದ ಐರ್ಲೆಂಡ್ ಶಿಕ್ಷಣ ತಂಡ, ತಜ್ಞರು, ನಾನಾ ವಿಭಾಗಗಳ ಮುಖ್ಯಸ್ಥರ ಜೊತೆ ಚರ್ಚಿಸುವ ಅಪರೂಪದ ಅವಕಾಶ ಭಾರತೀಯ ವಿದ್ಯಾರ್ಥಿಗಳಿಗೆ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.