ADVERTISEMENT

ವಿದ್ಯಾರ್ಥಿ ವಿನ್ಯಾಸ ವೈವಿಧ್ಯ

ರಂಜು ಪಿ
Published 28 ಫೆಬ್ರುವರಿ 2016, 19:34 IST
Last Updated 28 ಫೆಬ್ರುವರಿ 2016, 19:34 IST
ವಿದ್ಯಾರ್ಥಿ  ವಿನ್ಯಾಸ ವೈವಿಧ್ಯ
ವಿದ್ಯಾರ್ಥಿ ವಿನ್ಯಾಸ ವೈವಿಧ್ಯ   

ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳೇ ವಿನ್ಯಾಸ ಗೊಳಿಸಿದ ಆಕರ್ಷಕ ಕೆಂಪು ದಿರಿಸು ತೊಟ್ಟು ಬೆಕ್ಕಿನ ಹೆಜ್ಜೆ ಇಡುತ್ತಿದ್ದ ಬೆಡಗಿಯ ಕಾಲುಗಳಲ್ಲಿ ಬೆಳದಿಂಗಳ ಹೊಳಪು, ಗುಲಾಬಿರಂಗಿನ ತುಟಿಬಟ್ಟಲಿನಿಂದ ನಗು ತುಳುಕಿಸಿದ ಹುಡುಗಿಯದ್ದು ಚೆಂದದ ಮೈಮಾಟ. ಹೊಳೆವ ಚಿನ್ನದ ಬಣ್ಣದ ದಿರಿಸಲ್ಲಿ ಉದ್ಭವಿಸಿದ ಚೆಲುವೆಯ ವಯ್ಯಾರ, ಬಣ್ಣ ಬಣ್ಣದ ವಿನ್ಯಾಸಗಳ ವಸ್ತ್ರ ತೇರಿನೊಂದಿಗೆ ಪುಟಾಣಿಗಳ ಕಿರು ಹೆಜ್ಜೆಯ ಸದ್ದು. ವೇದಿಕೆ ಮೇಲೆ ಹೆಜ್ಜೆ ಇಟ್ಟು ಪ್ರೇಕ್ಷಕರತ್ತ ಕೈಮಾಡಿ ನಗುವ ಅವರ ಆತ್ಮವಿಶ್ವಾಸದ ಬೆರಗು. ಫ್ಯಾಷನ್‌, ಅಂದಚೆಂದ, ಮಕ್ಕಳ ನಗು, ಈ ಎಲ್ಲಾ ಭಾವಸಿರಿಯನ್ನು ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ನಡೆದ ಫ್ಯಾಷನಿಸ್ತಾದಿಂದ ಹೆಕ್ಕಿ ತಂದವರು ರಂಜು ಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.