ADVERTISEMENT

ವಿಶ್ವ ಗ್ಲಾಕೊಮಾ ಜಾಗೃತಿ ವಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ವಾಸನ್ ಐ ಕೇರ್ ಆಸ್ಪತ್ರೆಯು ಮಾರ್ಚ್ 11ರಿಂದ 17ರವರೆಗೆ `ವಿಶ್ವ ಗ್ಲಾಕೊಮಾ ವಾರ~ ವನ್ನು ಆಚರಿಸುತ್ತಿದೆ. ಜಯನಗರದಲ್ಲಿರುವ ಆಸ್ಪತ್ರೆಯ ಬಳಿ ಕಾಲ್ನಡಿಗೆ ಮೂಲಕ ಗ್ಲಾಕೊಮಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಡಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಶಾಸಕ ವಿಜಯ್ ಕುಮಾರ್ ಹಾಗೂ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ನಡಿಗೆಗೆ ಹಸಿರು ನಿಶಾನೆ ತೋರಿಸಿದರು.

ಮಾನವನ ದೇಹದಲ್ಲಿ ಗ್ಲಾಕೊಮಾ ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೆ ದೃಷ್ಟಿ ನರ ಹಾಳಾಗಿ ಶಾಶ್ವತ ಅಂಧತ್ವಕ್ಕೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು 2020ರ ವೇಳೆಗೆ ಭಾರತದಲ್ಲಿ 2 ಕೋಟಿ ಜನರು ಈ ರೋಗಕ್ಕೆ ತುತ್ತಾಗುತ್ತಾರೆಂದು ಅಂದಾಜು ಮಾಡಿದ್ದು, ಇದು  ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.
 
ಜನ ಜಾಗೃತಿ ಕಾರ್ಯಕ್ರಮದಲ್ಲಿ  ಕ್ರೀಡಾಪಟುಗಳಾದ ಸೀತಾರಾಮ್, ಫಾರ್ಮನ್ ಭಾಷ, ವೆಂಕಟೇಶ್, ರಾಘವೆಂದ್ರ ಅನ್ವೆಕರ್, ರಾಜೇಶ್ ಶಿಂಧೆ, ರಂಜನಿ ರಾಮಾನುಜಮ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.