
ಪ್ರಜಾವಾಣಿ ವಾರ್ತೆಜೆ ಸಿ ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಆಯೋಜಿಸಿದ್ದ ಅಂತರ ಕಾಲೇಜು ವಿಜ್ಞಾನೋತ್ಸವ `ವಿಸ್ಮಯ~ದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಸ್ಮಯ, ಜೈನ್ ಕಾಲೇಜಿನ ಕನಸಿನ ಕೂಸು. ಇದು ಕಾಲೇಜಿನ ಶಕ್ತಿ, ಉತ್ಸಾಹ ಹಾಗೂ ಭಾವೈಕ್ಯದ ಪ್ರತೀಕ. ವಿಸ್ಮಯದಲ್ಲಿ ಮೂಡಿಬಂದ `ಎಕ್ಸ್‌ಪ್ರೆಷನ್~ ಡಾನ್ಸ್ (ವಿಜ್ಞಾನದ ತಾಳಕ್ಕೆ ಸಮಕಾಲೀನ ನೃತ್ಯದ ಮೂಲಕ ಹೆಜ್ಜೆ ಹಾಕುವುದು) ಎಲ್ಲರ ಗಮನ ಸೆಳೆಯಿತು. ವೈಜ್ಞಾನಿಕ ವಿಚಾರಗಳನ್ನು ಮೂಕಾಭಿನಯದ ಮೂಲಕ ಒಬ್ಬ ವ್ಯಕ್ತಿ ತನ್ನ ತಂಡದ ಮತ್ತೊಬ್ಬ ವ್ಯಕ್ತಿಗೆ ಅಭಿವ್ಯಕ್ತಿ ಪಡಿಸುವ `ಸೈನ್ ಓ ಟಾಕ್~ ಸ್ಪರ್ಧೆ ರೋಚಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.