ADVERTISEMENT

ಶಾಪಿಂಗ್ ಮಾಡಿ ಬೈಕ್ ಗೆಲ್ಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

`ಬೈ ಮೋರ್ ವಿನ್ ಮೋರ್~ ಎಂದು ಸ್ಮಾರ್ಟ್ ರೀಟೇಲ್ ತನ್ನ ಗ್ರಾಹಕರಿಗಾಗಿ ವಿಶೇಷ ಅವಕಾಶವನ್ನು ಮುಂದಿಟ್ಟಿದೆ.

ಸ್ಮಾರ್ಟ್ ಮಳಿಗೆಯಲ್ಲಿ ನೀವು ಶಾಪಿಂಗ್ ಮಾಡುವುದು ಮಾತ್ರವಲ್ಲ,  ಬೈಕ್ ಕೂಡ ಗೆಲ್ಲಬಹುದು. ಶಾಪಿಂಗ್ ಮಾಡಿ, ಬೈಕ್ ಗೆಲ್ಲಿ ಎಂದು ಗ್ರಾಹಕರಿಗೆ ಕರೆ ನೀಡಿದೆ. ಇಲ್ಲಿ ಭೇಟಿ ನೀಡಿದ ಗ್ರಾಹಕರು 1000ರೂ ಮೇಲ್ಪಟ್ಟಂತೆ ವಸ್ತುಗಳನ್ನು ಖರೀದಿಸಿದರೆ ಅವರಿಗೆ ಸ್ಕೂಟಿ ಪೆಪ್ ಪ್ಲಸ್ ಗೆಲ್ಲುವ ಅವಕಾಶ ಒದಗಿಸಿದೆ.

ಪ್ರತಿ ತಿಂಗಳು `ಬೈ ಮೋರ್ ವಿನ್‌ಮೋರ್~ ಪರಿಕಲ್ಪನೆಯಡಿಯಲ್ಲಿ ನಾಲ್ಕು ಮಂದಿಗೆ ಸ್ಕೂಟಿ ಪೆಪ್ ಗೆಲ್ಲುವ  ಅವಕಾಶ ನೀಡಲಾಗುತ್ತದೆ. ತಿಂಗಳ ಮೊದಲ ಮೂರು ದಿನ ಹಿಂದಿನ ತಿಂಗಳ ನಾಲ್ಕು ವಿಜೇತರ ಹೆಸರನ್ನು ಆಯ್ಕೆ ಮಾಡಿ ಹೆಸರನ್ನು ಘೋಷಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.