ADVERTISEMENT

ಶಾಸನ, ಕಲೆಯಲ್ಲಿ ಮಹಿಳೆ...

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 13:40 IST
Last Updated 21 ಜನವರಿ 2011, 13:40 IST

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಮಹಾರಾಣಿ ಲಕ್ಷ್ಮಿಅಮ್ಮಣ್ಣಿ ಮಹಿಳಾ ಕಾಲೇಜು ಸೋಮವಾರ ಕರ್ನಾಟಕ ಶಾಸನ ಸಾಹಿತ್ಯ ಮತ್ತು ಕಲೆಗಳಲ್ಲಿ ಮಹಿಳಾ ಪರಿಕಲ್ಪನೆ ಎಂಬ ವಿಚಾರ ಸಂಕಿರಣ ಆಯೋಜಿಸಿದೆ.

ಉದ್ಘಾಟನೆ: ಡಾ. ಎಸ್.ವಿ. ವೆಂಕಟೇಶಯ್ಯ, ಅತಿಥಿ: ಡಾ. ಎಸ್.ಕೆ. ಅರುಣಿ, ಕೆ.ಎಸ್. ಭಾರತಿ, ಅಧ್ಯಕ್ಷತೆ: ಡಾ. ಟಿ.ಎಲ್. ಶಾಂತಾ.
ಬೆಳಿಗ್ಗೆ 12ರಿಂದ ಗೋಷ್ಠಿ 1: ಡಾ. ವಿ. ಅನುರಾಧ (ವಿಮೆನ್: ಡಿವೈನ್ ಆ್ಯಂಡ್ ಪ್ರೊಫೈಲ್), ಡಾ. ತಿಪ್ಪೇಸ್ವಾಮಿ (ಸ್ಮಾರಕ ಶಿಲ್ಪಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳೆಯರ ಹೆಸರಿನಲ್ಲಿ ಸ್ಥಾಪಿತವಾದ ಗ್ರಾಮಗಳು), ಡಾ. ಜಿ. ಮನೋಜ್ (ಹರಿದಾಸ ಸಾಹಿತ್ಯ ಮತ್ತು ತತ್ವಪದಗಳ ರಚನೆಯಲ್ಲಿ ಮಹಿಳೆಯರ ಕೊಡುಗೆ), ಡಾ. ಎಂ.ಎಸ್. ಕೃಷ್ಣಮೂರ್ತಿ (ವಿಮೆನ್ ಯಾಸ್ ಡಿಪಿಕ್ಟೆಡ್ ಇನ್)

ಮಧ್ಯಾಹ್ನ 2ರಿಂದ ಗೋಷ್ಠಿ 2: ಡಾ. ಸಂಗೀತಾ (ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರಿಯರ ಪಾತ್ರ), ಡಾ.ಪಿ.ವಿ. ಕೃಷ್ಣಮೂರ್ತಿ, ಡಾ. ಜಯಮ್ಮ ಕರಿಯಣ್ಣ (ಕರ್ನಾಟಕದ ಶಾಸನೋಕ್ತ ರಾಣಿಯರು, 10ನೇ ಶತಮಾನಕ್ಕಿಂತ ಪೂರ್ವ),  ಡಾ. ಸ್ಮಿತಾ ಸುರೇಬಾನ್‌ಕರ್ (ಮಹಿಳೆ ಮತ್ತು ಆಡಳಿತ),

ಮಧ್ಯಾಹ್ನ 4ರಿಂದ  ಗೋಷ್ಠಿ 3: ಡಾ. ತಮಿಳ್ ಸೆಲ್ವಿ (ಕರ್ನಾಟಕದ ತಮಿಳು ಶಾಸನಗಳಲ್ಲಿ ಮಹಿಳಾ ದಾನಿಗಳು), ಸವಿತಾ ರವಿಶಂಕರ್ (ವಚನಗಳಲ್ಲಿ ಸ್ತ್ರಿ ಪರಿಕಲ್ಪನೆ), ಸುಂಕಂ ಗೋವರ್ಧನ (ವಿದೇಶಿ ಪ್ರವಾಸಿಗರ ದೃಷ್ಟಿಯಲ್ಲಿ ಕರ್ನಾಟಕದ ಮಹಿಳೆಯರು), ಡಾ.ಆರ್. ಶೇಷಶಾಸ್ತ್ರಿ (ಆಂಧ್ರದ ಕೆಲವು ಶಾಸನೋಕ್ತ ಮಹಿಳಾ ಮಣಿಗಳು).

ಸ್ಥಳ: ಡಾ. ಕೆ.ಎನ್.ವಿ. ಶಾಸ್ತ್ರಿ ಸಭಾಂಗಣ, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ. ಬೆಳಿಗ್ಗೆ 10.30. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.