ADVERTISEMENT

ಶಿಕ್ಷಕರಿಗೆ ಕ್ವಿಜ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಹಿಲ್‌ವ್ಯೆ ಸ್ಕೂಲ್
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನ್ಯಾಷನಲ್ ಹಿಲ್‌ವ್ಯೆ ಪಬ್ಲಿಕ್ ಸ್ಕೂಲ್, ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿತ್ತು.

ಎಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ನ ಗೀತಾ ರೆಡ್ಡಿ ಮತ್ತು ಕ್ಲಾರಾ ಡೇವಿಡ್ ಪ್ರಥಮ ಸ್ಥಾನ, ಬಸವೇಶ್ವರ ನಗರ ಕಾರ್ಮೆಲ್ ಹೈಸ್ಕೂಲ್‌ನ ಕೆ.ಅಪರ್ಣಾ ಮತ್ತು ವಿನೋದಾ ರಾವ್ ದ್ವಿತೀಯ ಹಾಗೂ ರಾಜರಾಜೇಶ್ವರಿ ನಗರ ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಶಾಲೆಯ ಉಷಾ ಗೋದಾವರಿ, ಕವಿತಾ ಫಣೀಶ್ ತೃತೀಯ ಸ್ಥಾನ ಪಡೆದುಕೊಂಡರು.

ವಿಜೇತರಿಗೆ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಕೃತಿಗಳ ಜೊತೆಗೆ ಆಕರ್ಷಕ ಬಹುಮಾನ ನೀಡಲಾಯಿತು. ಸಿಎಂಆರ್ ಜ್ಞಾನಧಾರಾ ಟ್ರಸ್ಟ್‌ನ ಡಾ. ಕೆ.ಸಿ.ಸಬಿತಾ ರಾಮಮೂರ್ತಿ ಮುಖ್ಯ ಅತಿಥಿಯಾಗಿದ್ದರು.

ಬಾಲ್ಡ್‌ವಿನ್‌ನಲ್ಲಿ ಕೇಕ್
ರೆಸಿಡೆನ್ಸಿ ರಸ್ತೆಯ ಬಾಲ್ಡ್‌ವಿನ್ ಮೆಥಾಡಿಸ್ಟ್ ಕಾಲೇಜಿನಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಶಿಕ್ಷಕರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳೇ ಈ ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರರಿಗೆ ಗುಲಾಬಿ ಹೂ ನೀಡಿ ಗೌರವಿಸಿದರು.

~ಮಹಾನ್ ಶಿಕ್ಷಣ ತಜ್ಞ, ದಾರ್ಶನಿಕರಾಗಿದ್ದ ರಾಧಾಕೃಷ್ಣನ್ ಅವರ ಜೀವನ ಯುವ ಪೀಳಿಗೆಗೆ ಆದರ್ಶ. ಸಾಂಪ್ರದಾಯಿಕವಾಗಿ ಸಭೆ, ಸಮಾರಂಭ ನಡೆಸಿದರೆ ಯುವ ಜನ ಇದರಲ್ಲಿ ಅಂತಹ ಆಸಕ್ತಿ ತಳೆಯಲಾರರು ಎಂದು ಭಾವಿಸಿ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದೆವು~ ಎಂದು ಕಾಲೇಜಿನ ವಿದ್ಯಾರ್ಥಿ ಮುಖಂಡ ಪವನ್ ಹೇಳಿದರು.

ಶಿಕ್ಷಕರ ದಿನ ಎಂಬ ಒಂದೇ ಕಾರಣಕ್ಕೆ ಕೇಕ್ ಕತ್ತರಿಸಲಿಲ್ಲ; ಬದಲಿಗೆ ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ರೀತಿಯಲ್ಲಿ ಕಾಲೇಜಿನಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪ್ರೇರಣೆ ಸಿಗುತ್ತದೆ~ ಎಂದು ಪ್ರಾಚಾರ್ಯ ಡಾ.ಜೋಶ್ವಾ ಸ್ಯಾಮ್ಯುಯಲ್ ಅಭಿಪ್ರಾಯಪಟ್ಟರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.