ADVERTISEMENT

ಶ್ರೀ ಸಹಸ್ರ ಮಹಾಸುದರ್ಶನ ಯಜ್ಞ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನೆಲಮಂಗಲ ಸಮೀಪದ ದಾಸನಪುರದ ಶ್ರೀ ರಾಮಾನುಜ ಪೀಠಂನ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ಸಹಸ್ರ ಮಹಾಸುದರ್ಶನ ಯಜ್ಞ ಮತ್ತು ಅಷ್ಟಾಕ್ಷರಿ ಮಹಾಯಾಗವನ್ನು ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿದೆ.

  ಅಮೆರಿಕಾದ ಶಿವ-ವಿಷ್ಣು ದೇವಾಲಯದ ಆಸ್ಥಾನ ವಿದ್ವಾನ್ ಶ್ರೀ ಸವ್ಯಸಾಚಿ ಸ್ವಾಮೀಜಿ, ಶ್ರೀ ತಿರು ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯ ನಡೆಯಲಿದ್ದು, ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಮಹಾಸುದರ್ಶನ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಚಕ್ರಪಾಣಿ ಆಚಾರ್ಯ, ಶ್ರೀ ಉದಯಯೋಗಾನಂದರು ತಮ್ಮ ತಂಡದೊಂದಿಗೆ 108 ಕುಂಡಗಳಲ್ಲಿ ಯಜ್ಞ ನಡೆಸಿಕೊಡಲಿದ್ದಾರೆ.

ಶನಿವಾರ ಸಂಜೆ 5ರಿಂದ 9ರವರೆಗೆ ವೇದ ಘೋಷ, ಸಭಾಅನುಜ್ಞೆ, ಭಗವತ್ ವಾಸುದೇವ ಪುಣ್ಯಾಹ, ಅನಿರ್ವಾಣದೀಪಾರೋಹಣ, ಅಂಕುರಾರ್ಪಣ ರಕ್ಷಾಬಂಧನ, ಕಳಶ ಸ್ಥಾಪನೆ ಮತ್ತು ಆರಾಧನೆ, ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ನರಸಿಂಹ ಸಹಿತ ಮಹಾಸುದರ್ಶನಹೋಮ, ಲಘು ಪೂರ್ಣಾಹುತಿ ಅಷ್ಟವಾದನ ಸೇವೆ, ಶಾತುಮೊರೈ, ರಾಷ್ಟ್ರಶೀರ್ವಾದ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಭಾನುವಾರ ಬೆಳಗ್ಗೆ 6ರಿಂದ 12 ಗಂಟೆವರೆಗೆ ಸುಪ್ರಭಾತ ಸೇವೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಗೋವಿಂದ ನಾಮಾವಳಿ, ಭಜನೆ, ನಿತ್ಯಾರಾಧನೆ, ಪ್ರಬಂಧ ಸೇವೆ, ಸಾಮೂಹಿಕ ಅಷ್ಟಾಕ್ಷರಿ ಮಂತ್ರಜಪ, ಶ್ರೀ ನರಸಿಂಹ ಸಹಿತಿ ಮಹಾಸುದರ್ಶನ ಹೋಮ, ಮಹಾಸಂಕಲ್ಪ, ಮಹಾಪೂರ್ಣಾಹುತಿ, ಅಷ್ಠವಾದನ ಸೇವೆ, ಶಾತುಮೊರೈ, ಮಂತ್ರಪುಷ್ಪ, ರಾಷ್ಟ್ರಾಶೀರ್ವಾದ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ನಡೆಯುವ ಧರ್ಮ ಸಭೆಯಲ್ಲಿ ಶಿಕ್ಷಣ, ಅಧ್ಯಾತ್ಮ, ಸ್ವಸ್ಥಸಮಾಜ ನಿರ್ಮಾಣ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಭದ್ರಾವತಿಯ ಸೌಮ್ಯಕಾಳಿ ಮಹಾಸಂಸ್ಥಾನದ ನಿರ್ಮಲಾನಂದಪುರಿ ಸ್ವಾಮೀಜಿ, ಬಸವನಹಳ್ಳಿ ಜಗದ್ಗುರು ರಾಮಾನುಜ ಪೀಠದ  ರಾಮಕೃಷ್ಣಾಚಾರ್ಯ, ಬಾಗಲಗುಂಟೆಯ ಆಗಮಿಕ ನರಸಿಂಹಮೂರ್ತಿ, ಚನ್ನನಾಯಕನಪಾಳ್ಯದ ಜ್ಯೋತಿಷ್ಶಾಸ್ತ್ರಜ್ಞ ನಾರಾಯಣಸ್ವಾಮಿ ನಡೆಸಿಕೊಡಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.