ADVERTISEMENT

ಸನ್ನಿ ಈಗ ‘ವೀರ ಮಹಾದೇವಿ’

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:30 IST
Last Updated 22 ಮೇ 2018, 19:30 IST
ವೀರ ಮಹಾದೇವಿಯಾಗಿ ಸನ್ನಿ ಲಿಯೋನ್‌
ವೀರ ಮಹಾದೇವಿಯಾಗಿ ಸನ್ನಿ ಲಿಯೋನ್‌   

ನೀಲಿ ಚಿತ್ರಗಳ ಇಮೇಜ್ ದಾಟಿಕೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಟಿ ಸನ್ನಿ ಲಿಯೋನ್‌ ಕನ್ನಡದಲ್ಲಿಯೂ ಹಾಡೊಂದಕ್ಕೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ದಿಲ್‌ ಜಲ್‌ ಎನ್ನಿಸಿದ್ದ ಸನ್ನಿ ಇದೀಗ ಮಹಾದೇವಿಯಾಗಿದ್ದಾರೆ. ಹೌದು, ಗ್ಲ್ಯಾಮರ್‌ ಮೂಲಕವೇ ಹೆಸರಾಗಿದ್ದ ಅವರೀಗ ನಟನೆಯ ಗ್ರಾಮರ್‌ಗೆ ಹೆಚ್ಚು ಒತ್ತುಕೊಟ್ಟು ಐತಿಹಾಸಿಕ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ತಯಾರಾಗಲಿದೆ. ₹ 100 ಕೋಟಿ ಬಜೆಟ್‌ನ ಈ ಸಿನಿಮಾದ ಹೆಸರು ‘ವೀರ ಮಹಾದೇವಿ’.

ವಿ. ಸಿ. ವಡಿವುದೈಯನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಪೊಸ್ಸೇ ಸ್ಟೀಫನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಭಾಷೆಯಲ್ಲಿಯೂ ರೂಪುಗೊಳ್ಳಲಿದೆ ಎನ್ನುವುದು ವಿಶೇಷ. ಅಮ್ರೀಶ್‌ ಗಣೇಶ್‌ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಈ ಪಾತ್ರಕ್ಕಾಗಿ ಅವರು ಕತ್ತಿ ವರಸೆ, ಕುದುರೆ ಸವಾರಿ ಮತ್ತು ಮಾರ್ಷಲ್‌ ಆರ್ಟ್ಸ್‌ ತರಬೇತಿ ಪಡೆದುಕೊಂಡು ಸಿದ್ಧರಾಗಿದ್ದಾರೆ. ತಮಿಳು, ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಚಿತ್ರ ತಯಾರಾಗಲಿದೆ.

ADVERTISEMENT

ವೀರ ಮಹಾದೇವಿ ರೂಪದಲ್ಲಿ ಕುದುರೆ ಏರಿ ಕುಳಿತಿರುವ ಚಿತ್ರವನ್ನು ಸನ್ನಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 150 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜಿಸಿಕೊಂಡಿದೆ ರಾಮೋಜಿ ಫಿಲಂ ಸಿಟಿಯಲ್ಲಿ ಬಹುಭಾಗ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.

ಕೆನಡಾ ದೇಶದ ತಂತ್ರಜ್ಞರಿಂದ ಈ ಚಿತ್ರಕ್ಕೆ ಗ್ರಾಫಿಕ್ಸ್‌ ಮಾಡಲೂ ತಂಡ ಯೋಜಿಸಿದೆ. ಅದಕ್ಕಾಗಿಯೇ ₹ 40 ಕೋಟಿ ವ್ಯಯಿಸಲಾಗುವುದು ಎಂದು ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.