ಕುಂಭಾಭಿಷೇಕ
ಕೋದಂಡರಾಮಸ್ವಾಮಿ ದೇವಸ್ಥಾನ: ಮಂಗಳವಾರ ಮಹಾದ್ವಾರ ರಾಜಗೋಪುರ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರ. ಬೆಳಿಗ್ಗೆ ಧ್ವಜಾರೋಹಣ, ಸಂಜೆ ವಾಸುದೇವ ಪುಣ್ಯಾಹವಾಚನ, ಶೇಷ ವಾಹನ ಸೇವೆಯಲ್ಲಿ ಶೋಭಾಯಾತ್ರೆ. ಬುಧವಾರ ಬೆಳಿಗ್ಗೆ ದ್ವಾರತೋರಣ ಪೂಜೆ, ಸಂಜೆ ವಿಷ್ಣುಸಹಸ್ರನಾಮ ಪಾರಾಯಣ, ಹಂಸವಾಹನ ಸೇವೆ.ಸ್ಥಳ: ವರ ವೆಂಕಟ ಕೋದಂಡ ರಾಮಭದ್ರ ಕ್ಷೇತ್ರ, ಈಜೀಪುರ, ವಿವೇಕನಗರ.
ಪಾವಗಡ ಪ್ರವಚನ
ಸಂಜೀವಿನಿ ಸೇವಾ ಸಮಿತಿ ಟ್ರಸ್ಟ್: ಪಾವಗಡ ಪ್ರಕಾಶ್‌ರಾವ್ ಅವರಿಂದ ‘ಲಕ್ಷ್ಮೀಶನ ಜೈಮಿನಿ ಭಾರತ’ ಕುರಿತು ಪ್ರವಚನ. ಸ್ಥಳ; ನವ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ. ಸಂಜೆ 6.
ಸಂಗೀತ ಗೋಷ್ಠಿ
ಶ್ರೀ ರಾಮಸೇವಾ ಮಂಡಲಿ: ಮಂಗಳವಾರ ಬಿ.ಎನ್. ಸ್ಕಂದಕುಮಾರ್ ಮತ್ತು ತಂಡದವರಿಂದ ಗಾಯನ. ಅನುರಾಧ ಮಧುಸೂದನ್ (ದಶ ವೈಣಿಕ ವೈಭವ), ಸಿ. ಚೆಲುವರಾಜ್, ಸುಕನ್ಯಾ ರಾಂಗೋಪಾಲ್ ಅವರಿಂದ ಸಂಗೀತ ಗೋಷ್ಠಿ.ಬುಧವಾರ ಬಿ.ಎಸ್.ಮುರಳಿ ಮತ್ತು ತಂಡದವರಿಂದ ಸುಗಮ ಸಂಗೀತ. ಕನ್ಯಾಕುಮಾರಿ ಮತ್ತು ಎಂಬಾರ್ ಎಸ್.ಕಣ್ಣನ್ (ಪಿಟೀಲು ದ್ವಂದ್ವ), ಕೆ.ವಿ.ಪ್ರಸಾದ್, ಎನ್. ಅಮೃತ್ ಸಂಗೀತ ಗೋಷ್ಠಿ.ಸ್ಥಳ: ಕೋಟೆ ಆವರಣ ಹೈಸ್ಕೂಲ್, ಚಾಮರಾಜಪೇಟೆ. ಸಂಜೆ 5.15.
ಉಪನ್ಯಾಸ, ದಾಸವಾಣಿ
ಹರಿದಾಸ ಸಂಪದ ಟ್ರಸ್ಟ್, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್: ಮಂಗಳವಾರ ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಉಪನ್ಯಾಸ. ಶಂಕರ ಶಾನಭೋಗ್ ಅವರಿಂದ ದಾಸವಾಣಿ.ಬುಧವಾರ ಡಾ. ನಾರಾಯಣಾಚಾರ್ಯ ಧೂಳಖೇಡ ಅವರಿಂದ ಉಪನ್ಯಾಸ. ಆರ್.ಕೆ. ಪದ್ಮನಾಭ ದಾಸವಾಣಿ.ಸ್ಥಳ: ಬೆಂಗಳೂರು ಗಾಯನ ಸಮಾಜ. ಸಂಜೆ 5.
ಪ್ರವಚನ
ಚಿನ್ಮಯ ಮಿಷನ್: ಮಂಗಳವಾರ ಸುಧರ್ಮ ಚೈತನ್ಯ ಅವರಿಂದ ‘ಗುರುನಾನಕ’ ಮತ್ತು ಬುಧವಾರ ‘ಶ್ರೀಧರ ಸ್ವಾಮಿಗಳು’ ಕುರಿತು ಪ್ರವಚನ.ಸ್ಥಳ: ಚಿನ್ಮಯ ಮಿಷನ್, ಶ್ರೀಪಾದಕ್ಷೇತ್ರ, 4ನೇ ಅಡ್ಡ ರಸ್ತೆ, ಜೆ.ಪಿ.ನಗರ 4ನೇ ಹಂತ. ನಿತ್ಯ ಸಂಜೆ 6.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.