ADVERTISEMENT

ಸಾಂಸ್ಕೃತಿಕ ಮುನ್ನೋಟ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಅಕ್ಟೋಬರ್ 24, ಸೋಮವಾರ

ಪ್ರತಿಭೋತ್ಸವ
ರಂಗಾಭರಣ ಕಲಾ ಕೇಂದ್ರ: ರಂಗಾಭರಣ ಪ್ರತಿಭೋತ್ಸವ. ಅತಿಥಿಗಳು: ಡಿ.ಬಿ.ಚಂದ್ರೇಗೌಡ, ಶಂಕರ ಬಿದರಿ, ಎಚ್.ಎಂ.ರೇವಣ್ಣ, ಕಾ.ತ.ಚಿಕ್ಕಣ್ಣ, ಹನುಮಂತೇಗೌಡ, ಎಂ.ನಾಗರಾಜ್, ಲಕ್ಷ್ಮಣ್, ಎನ್. ವಿಶ್ವನಾಥ್.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 4.

ಭಾಗವತ ಪಂಚಮಸ್ಕಂದ

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಪ್ರವಚನ.
ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.

ನೀರು ತುಂಬುವ ಹಬ್ಬ
ಸನಾತನ ಭಕ್ತ ಮಂಡಳಿ ಟ್ರಸ್ಟ್: ಸಂಜೆ ನೀರು ತುಂಬುವ ಹಬ್ಬ-ಪ್ರದೋಷ.
ಸ್ಥಳ: ಕೋದಂಡರಾಮ ದೇವಸ್ಥಾನ, ನಂ.ಸಿ.ಎ. 1/2, ಕಾರ್ಡ್ ರಸ್ತೆ ಪೂರ್ವ, ವಿಜಯನಗರ.

ಅಧ್ಯಾಸಭಾಷ್ಯಂ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.
ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಕಿತ್ತೂರು ಚೆನ್ನಮ್ಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಣೆ. ಬೆಳಿಗ್ಗೆ 10ಕ್ಕೆ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ. ಅತಿಥಿಗಳು: ಗೋವಿಂದ ಎಂ.ಕಾರಜೋಳ, ಆರ್.ಅಶೋಕ್, ಅನಂತಕುಮಾರ್. ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ: ನಾಗಮಂಗಲದ ಎನ್.ಮಹದೇವಪ್ಪ ಮತ್ತು ತಂಡದಿಂದ ವೀರಗಾಸೆ. ಶಿವಮೊಗ್ಗದ ಎಂ.ಸಿ.ಪುರುಷೋತ್ತಮ ಮತ್ತು ತಂಡದಿಂದ ಡೊಳ್ಳು ಕುಣಿತ, ಕೆ.ಬಿ.ಕೃಷ್ಣ ಮತ್ತು ತಂಡದಿಂದ ನಂದಿಧ್ವಜ, ಅರ್ಚನಾ ಉಡುಪ ಮತ್ತು ತಂಡದಿಂದ ದೇಶ ಭಕ್ತಿ ಗೀತೆ. ನಂತರ ಗೌರಿ ಸಾಸ್ತಾನ ನೇತೃತ್ವದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ತಂಡದಿಂದ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಯಕ್ಷಗಾನ (ಪರಿಕಲ್ಪನೆ: ಶ್ರೀನಿವಾಸ ಸಾಸ್ತಾನ. ಕಲಾವಿದರು: ಗೌರಿ, ಸುಜಾತಾ, ಲತಾ ರಮೇಶ್, ಲತಾ ಹೊಳ್ಳ, ಲತಾ ಮೂರ್ತಿ, ಅಂಬಿಕಾ, ಆಶಾ ರಾಘವೇಂದ್ರ, ಪ್ರತಿಮಾ, ಪವಿತ್ರ, ಪ್ರಣೀತ, ಶ್ರುತಿ, ರಮ್ಯ, ಶ್ರೀಲಕ್ಷ್ಮಿ).
ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ.

ಕಾರ್ತಿಕ ದೀಪೋತ್ಸವ
ಇಸ್ಕಾನ್: ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, 8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸ್ಥಳ: ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ.

ಮಿತಿಯಿಲ್ಲದ ಏಣಿ, ನ್ಯಾನೊ ಪ್ರಪಂಚ
ನವಕರ್ನಾಟಕ ಪಬ್ಲಿಕೇಷನ್ಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ಅವರಿಂದ ಡಾ.ಎಚ್. ಎಸ್. ನಿರಂಜನ ಆರಾಧ್ಯ ಅನುವಾದಿಸಿರುವ `ಮಿತಿಯಿಲ್ಲದ ಏಣಿ- ರಸಾಯನ ಶಾಸ್ತ್ರದಲ್ಲಿ ಜೀವನ~ (ಆತ್ಮಕಥೆ), ಇಂದುಮತಿರಾವ್ ಅನುವಾದಿಸಿರುವ `ನ್ಯಾನೊ ಪ್ರಪಂಚ~ (ನ್ಯಾನೊ ವಿಜ್ಞಾನ ಹಾಗೂ ನ್ಯಾನೊ ತಂತ್ರಜ್ಞಾನದ ಪರಿಚಯ. ಮೂಲ: ಪ್ರೊ.ಸಿ.ಎನ್. ಆರ್.ರಾವ್) ಮತ್ತು ಪ್ರೊ.ಸಿ.ಎನ್. ಆರ್.ರಾವ್ ಅವರ `ನ್ಯಾನೊ ವರ್ಲ್ಡ್- ಆನ್ ಇನ್ಟ್ರಡಕ್ಷನ್ ಟು ನ್ಯಾನೊ ಸೈನ್ಸ್ ಅಂಡ್ ಟೆಕ್ನಾಲಜಿ~ ಕೃತಿಗಳ ಲೋಕಾರ್ಪಣೆ.
ಕೃತಿ ಕುರಿತು: ಪ್ರೊ. ರೊದ್ದಂ ನರಸಿಂಹ. ಅಧ್ಯಕ್ಷತೆ: ಪ್ರೊ.ಎಂ.ಆರ್.ಎಸ್. ರಾವ್.
ಸ್ಥಳ: ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಜಕ್ಕೂರು. ಬೆಳಿಗ್ಗೆ 11.

ಮತ್ಸ್ಯಗಂಧಿಯ ಹಾಡು
ಸಮತಾ ಸೈನಿಕ ದಳ, ಕೆಂಗುಲಾಬಿ ಪ್ರಕಾಶನ ಕೂಡ್ಲಿಗಿ: ಡಾ.ಸಿದ್ದಲಿಂಗಯ್ಯ ಅವರಿಂದ ಅನಸೂಯ ಕಾಂಬಳೆ ಅವರು ಬರೆದಿರುವ `ಮತ್ಸ್ಯಗಂಧಿಯ ಹಾಡು~ (ಕವನ ಸಂಕಲನ) ಲೋಕಾರ್ಪಣೆ. ಕೃತಿ ಕುರಿತು: ಡಾ.ನಟರಾಜ ಹುಳಿಯಾರ್. ಅತಿಥಿಗಳು: ಮೂಡ್ನಾಕುಡು ಚಿನ್ನಸ್ವಾಮಿ, ಸನತ್‌ಕುಮಾರ ಬೆಳಗಲಿ, ದು.ಸರಸ್ವತಿ, ಸುಬ್ಬು ಹೊಲೆಯಾರ್. ಅಧ್ಯಕ್ಷತೆ: ಎಂ.ವೆಂಕಟಸ್ವಾಮಿ.
ಸ್ಥಳ: ನಾಟಕ ಚಾವಡಿ, ಕನ್ನಡ ಭವನ, ಜೆ ಸಿ ರಸ್ತೆ. ಸಂಜೆ 5.

ಛಾಂದೋಗ್ಯೋಪನಿಷತ್
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಸುದರ್ಶನ ಶರ್ಮಾ ಅವರಿಂದ `ಛಾಂದೋಗ್ಯೋಪನಿಷತ್~ ಪ್ರವಚನ.
ಸ್ಥಳ: 68, ಎಪಿಕೆ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಬೆಳಿಗ್ಗೆ 9.30.

ಮೋರ್ಚಿಂಗ್ ತರಂಗ್
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್: ಎಲ್. ಭೀಮಾಚಾರ್, ಬಿ.ಧ್ರುವರಾಜ್, ಬಿ.ರಾಜಶೇಖರ್ ಹಾಗೂ ಭಾಗ್ಯಲಕ್ಷ್ಮಿ ಎಂ.ಕೃಷ್ಣ ಅವರಿಂದ `ಮೋರ್ಚಿಂಗ್ ತರಂಗ್~ ವಾದ್ಯ ಗೋಷ್ಠಿ.
ಸ್ಥಳ: ಟೆರಿ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ದೊಮ್ಮಲೂರು 2ನೇ ಹಂತ. ಸಂಜೆ 6.30.

ಜಾನಪದ ಮಧುರ ಜೇನು
ರಂಗಸಂಸ್ಥಾನ, ಸುಮಂಗಲಿ ಸೇವಾಶ್ರಮ: `ಜಾನಪದ ಮಧುರ ಜೇನು~ ಕಾರ್ಯಕ್ರಮದಲ್ಲಿ ರಂಗಸಂಸ್ಥಾನ ವಿದ್ಯಾರ್ಥಿಗಳಿಂದ ಜಾನಪದ ಗಾಯನ. ರಾಧಾಕೃಷ್ಣರಾವ್ (ಕೀಬೋರ್ಡ್), ಗಂಗಾಧರ್ (ತಬಲಾ), ಜೆರಾಲ್ಡ್ (ರಿದಂಪ್ಯಾಡ್).
ಉದ್ಘಾಟನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ. ಅತಿಥಿಗಳು: ಜಾಣಗೆರೆ ವೆಂಕಟರಾಮಯ್ಯ, ಜಯಪ್ಪರೆಡ್ಡಿ, ಬಂಡ್ಲಹಳ್ಳಿ ವಿಜಯಕುಮಾರ್. ಅಧ್ಯಕ್ಷತೆ: ಎಸ್.ಜಿ. ಸುಶೀಲಮ್ಮ.
ಸ್ಥಳ: ಕುವೆಂಪು ರಂಗಮಂದಿರ, ಸುಮಂಗಲಿ ಸೇವಾಶ್ರಮ, ಚೋಳನಾಯ್ಕನಹಳ್ಳಿ, ಹೆಬ್ಬಾಳ. ಬೆಳಿಗ್ಗೆ 10.30.

ಕೋಮಲ ಗಾಂಧಾರ
ಸಮಾನ ಮನಸ್ಕರು: ಹೊಸಬರು ರಂಗ ತಂಡದಿಂದ `ಕೋಮಲ ಗಾಂಧಾರ~ ನಾಟಕ ಪ್ರದರ್ಶನ (ರಚನೆ: ಶಂಕರ ಶೇಷ. ಕನ್ನಡಕ್ಕೆ: ಮ.ಸು.ಕೃಷ್ಣಮೂರ್ತಿ. ಸಂಗೀತ: ವಿ.ಎನ್.ಅಶ್ವತ್ಥ್. ನಿರ್ದೇಶನ: ವಿ.ವಿ.ಅನಂತರಂಗಾಚಾರ್).
ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಮುಂಭಾಗ, ಜೆ.ಸಿ.ರಸ್ತೆ. ಸಂಜೆ 6.30.

ವಚನ ಸಾಹಿತ್ಯದಲ್ಲಿ...
ಬಸವ ಸಮಿತಿ: ನಾಯಕನಹಟ್ಟಿ ಎಚ್.ಎಂ.ತಿಪ್ಪೇಸ್ವಾಮಿ ಸ್ಮರಣಾರ್ಥ `ಅರಿವಿನ ಮನೆ~ಯಲ್ಲಿ ಎಚ್.ವಿ. ರಾಮಚಂದ್ರರಾವ್ ಅವರಿಂದ `ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ~ ಉಪನ್ಯಾಸ. ಅತಿಥಿ: ವಿಮಲ ರಾಜಗೋಪಾಲ. ಅಧ್ಯಕ್ಷತೆ: ಎಚ್.ಎಸ್. ದೇವಾಡಿಗ.
ಸ್ಥಳ: ಬಸವ ಸಮಿತಿ, ಚಾಲುಕ್ಯ ಹೋಟೆಲ್ ಸಮೀಪ. ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.