ADVERTISEMENT

ಸಾಂಸ್ಕೃತಿಕ ಮುನ್ನೋಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಇಂದು ಮತ್ತು ನಾಳೆ, ನಾಡಿದ್ದು...
ದೇವಸ್ಥಾನ ಪ್ರತಿಷ್ಠಾಪನೆ
ಶ್ರೀಕಾಲ ಭೈರವೇಶ್ವರಸ್ವಾಮಿ ದತ್ತಿ ಸಂಸ್ಥೆ:
ಮಹಾಗಣಪತಿ, ಶ್ರೀ ಪ್ರಸನ್ನ ಪಾರ್ವತಾಂಬ, ಆದಿತ್ಯಾದಿ ನವಗ್ರಹಗಳ ನೂತನ ವಿಗ್ರಹಗಳ ಅಷ್ಟಬಂಧನ ಪ್ರತಿಷ್ಠಾಪನೆ. ಬೆಳಿಗ್ಗೆ ಗಣಪತಿ ಪೂಜೆ, ಹೋಮ. ಸಂಜೆ ವೇದಪಾರಾಯಣ, ಅಷ್ಟಬಂಧನ ಪ್ರತಿಷ್ಠಾಪನೆ.  ಭಾನುವಾರ ಬೆಳಿಗ್ಗೆ 10.15ಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಮಹಾಕುಂಭಾಭಿಷೇಕ. ಅನ್ನದಾನ. ಸ್ಥಳ: ನಾಡಪ್ರಭು ಕೆಂಪೇಗೌಡ ಜೋಡಿ ರಸ್ತೆ, ಬಿಇಎಂಎಲ್ ಬಡಾವಣೆ, ರಾಜರಾಜೇಶ್ವರಿನಗರ.

ಕಲಾ ಪ್ರದರ್ಶನ
ಗ್ಯಾಲರಿ ಕಿವಾಷ್:
ಶನಿವಾರದಿಂದ 15ರ ವರೆಗೆ ಹೈದರಾಬಾದ್‌ನ ಟಿ. ಶಿವಾಜಿ ಮತ್ತು ರಾಜು ಯೆಪೂರಿ ಅವರ ‘ದಿ ಅನ್‌ಟೋಲ್ಡ್ ಸ್ಟೋರಿಸ್ ಆಫ್ ಮೆನ್ ಅಂಡ್ ವುಮನ್’ ಚಿತ್ರಕಲಾ ಪ್ರದರ್ಶನ. ಸ್ಥಳ: ಗ್ಯಾಲರಿ ಕಿವಾಷ್, 74/1, ರೈಲ್ವೆ ಪ್ಯಾರಲಲ್ ರಸ್ತೆ, ಕುಮಾರ ಕೃಪಾ ಪಶ್ಚಿಮ. ಬೆಳಿಗ್ಗೆ 11 ರಿಂದ ಸಂಜೆ 7. ಮಾಹಿತಿಗೆ 2356 4576.

ಪ್ರವಚನ
ಶ್ರೀ ವಿಜಯವಿಠಲ ಸಂಗೀತ ಕಲಾ ವೇದಿಕೆ:
ಭಾನುವಾರ ಮತ್ತು  ಸೋಮವಾರ ಕಡಗತ್ತೂರು ಪುರುಷೋತ್ತಮಾಚಾರ್ಯ ಅವರಿಂದ ‘ಭಾಗವತ ತೃತೀಯ ಸ್ಕಂದ’ ಪ್ರವಚನ. ಸ್ಥಳ: ಉಡುಪಿ ಫಲಿಮಾರು ಮಠ, ಸಂಪಿಗೆ ರಸ್ತೆ (ಫುಡ್ ವರ್ಲ್ಡ್ ಎದುರು), ಮಲ್ಲೇಶ್ವರಂ. ನಿತ್ಯ ಸಂಜೆ 7.

ಅಧ್ಯಾಸ ಭಾಷ್ಯಂ
ಪರಮಾರ್ಥ ವಿಚಾರ ಸಂಘ :
ಕೆ.ಜಿ. ಸುಬ್ರಾಯಶರ್ಮಾ ಅವರಿಂದ ‘ಅಧ್ಯಾಸ ಭಾಷ್ಯಂ’ ಸ್ಥಳ: ಅಧ್ಯಾತ್ಮ ಮಂದಿರ, ವಿ.ವಿ. ಪುರಂ. ಬೆಳಿಗ್ಗೆ 7.45.

ಶ್ರೀಮದ್ಭಾಗವತ
ಶ್ರೀ ಕೃಷ್ಣ ಪ್ರಜ್ಞ ಪ್ರತಿಷ್ಠಾನ:
ಶನಿವಾರ ಮತ್ತು ಭಾನುವಾರ ಶ್ರೀ ಗುರುರಾಜ ಆಚಾರ್ಯ ಅವರಿಂದ ಶ್ರೀಮದ್ಭಾಗವತ ಪ್ರವಚನ. ಸ್ಥಳ: ಶ್ರೀ ವಿದ್ಯಾಧೀಶ ಸಭಾಂಗಣ, ನಂ 76, ವಾಣಿವಿಲಾಸ ರಸ್ತೆ, ಬಸವನಗುಡಿ. ನಿತ್ಯ ಸಂಜೆ 6.

ಕೈಲಾಸೋತ್ಸವ
ಜ್ಯೋತಿನಗರೇಶ್ವರಸ್ವಾಮಿ ಮತ್ತು ಚೆನ್ನಕೇಶವಸ್ವಾಮಿ ದೇವಸ್ಥಾನ:
ಶನಿವಾರ ಬೆಳಿಗ್ಗೆ 7ಕ್ಕೆ ವಿಶೇಷ ಪೂಜೆ. ಭಾನುವಾರ ಸಂಜೆ 6ಕ್ಕೆ ಕೈಲಾಸೋತ್ಸವ. ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ.ಸ್ಥಳ: ನಗರ್ತಪೇಟೆ ಕ್ರಾಸ್, ಗಾಣಿಗರಪೇಟೆ.

ಮಹಾಭಾರತ
ಸದ್ವಿಚಾರ ಸೇವಾ ಟ್ರಸ್ಟ್:
  108 ದಿನಗಳ ಶ್ರೀಮನ್ ಮಹಾಭಾರತ ಪ್ರವಚನ ಮಾಲಿಕೆಯಲ್ಲಿ ಚುತುರ್ವೇದಿ ವೇದವ್ಯಾಸಾಚಾರ್ಯ ಅವರಿಂದ ಪ್ರವಚನ. ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ. ಸಂಜೆ 6.30.

ಪ್ರವಚನ
ದೇವಗಿರಿ ಶ್ರೀ ಗುರು ಸೇವಾ ಸಮಿತಿ:
ಧನಂಜಯಾಚಾರ್ಯ ಅವರಿಂಧ ಮಹಾಭಾರತ ಪ್ರವಚನ.
ಸ್ಥಳ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 7.

ಗೀತಾ ಮಾಲಿಕೆ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:
ಆನಂದ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಂದ ‘ಭಗವದ್ಗೀತಾ ಮಾಲಿಕೆ 2’ ಪ್ರವಚನ.  ಸ್ಥಳ: ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ತ್ಯಾಗರಾಜನಗರ. ಬೆಳಿಗ್ಗೆ 9.

 ಧರ್ಮಯೋಗ
 ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ:
ಡಾ. ಎಚ್.ಎಸ್.ಲಕ್ಷ್ಮೀನಾರಾಯಣ ಭಟ್ ಅವರಿಂದ ಡಿವಿಜಿಯವರ ‘ಜೀವನ ಧರ್ಮಯೋಗ’ ಕುರಿತು ಉಪನ್ಯಾಸ. ಸ್ಥಳ: ರಾಗಿಗುಡ್ಡ, ಜಯನಗರ 9ನೇ ಬ್ಲಾಕ್. ಸಂಜೆ 6.30.

ದೇವಿ ಅಲಂಕಾರ
ಶ್ರೀ ಕಾಳಿಯಮ್ಮನ ದೇವಾಲಯ:
ಶನಿವಾರ ವಿಮಾನ ಗೋಪುರ ಮತ್ತು ರಾಜಗೋಪುರದ ಮಹಾ ಕುಂಭಾಭಿಷೇಕ ನಿಮಿತ್ತ ಬೆಳಿಗ್ಗೆ 8ಕ್ಕೆ ಮುತ್ತು ಮಾರಿಯಮ್ಮನ ಅಲಂಕಾರ, ಹೋಮ. ಸಂಜೆ ಕಳಶ ಪೂಜೆ.
ಭಾನುವಾರ ಬೆಳಿಗ್ಗೆ 6ಕ್ಕೆ ಸಮಯಪುರ ಮಾರಿಯಮ್ಮನ ಅಲಂಕಾರ. ಸಂಜೆ 6ಕ್ಕೆ ‘ಕ್ಲಾರಿನೆಟ್ ಸೆಲ್ವರಾಜ್’ ಅವರಿಂದ ವಾದ್ಯ ಕಛೇರಿ. ಸೋಮವಾರ ಬೆಳಿಗ್ಗೆ 7.30ಕ್ಕೆ ಕರುಮಾರಿಯಮ್ಮನ ಅಲಂಕಾರ. ಸಂಜೆ 6ಕ್ಕೆ ‘ಶರಣ ತರಂಗಿಣಿ ಪಿ. ಸಭಾಪತಿ, ಜೂನಿಯರ್ ವೀರಮಣಿ’ ಅವರಿಂದ ಭಕ್ತಿಗೀತೆ. ಸ್ಥಳ: ಕಾಳಿಯಮ್ಮನ ದೇವಾಲಯ ಬೀದಿ, ಹಲಸೂರು ಮಾರ್ಕೆಟ್.

ಥಿಯಾಸಫಿ ಸಂದೇಶ
ಬೆಂಗಳೂರು ಥಿಯಸಾಫಿಕಲ್ ಸೊಸೈಟಿ:
ಶನಿವಾರ ಸಂಜೆ 4.30ಕ್ಕೆ ಲಲಿತಾ ನಟರಾಜ್ ಅವರಿಂದ ‘ಧ್ಯಾನ ಮತ್ತು ಧ್ಯಾನಕ್ಕೆ ಪೂರ್ವ ಸಿದ್ಧತೆ’ ಕುರಿತು ಉಪನ್ಯಾಸ. ಸ್ಥಳ: 101, ಸ್ವಜ್ಯೋತಿ, 2ನೇ ಅಡ್ಡ ರಸ್ತೆ, ವಿಜಯನಗರ, ಇನ್‌ಕಂಟ್ಯಾಕ್ಸ್ ಲೇಔಟ್. ಭಾನುವಾರ ಬೆಳಿಗ್ಗೆ 9.55ಕ್ಕೆ ರುಕ್ಮಿಣಿ ಕೃಷ್ಣಮೂರ್ತಿ ಅವರಿಂದ ‘ಮಾರ್ಗಜ್ಯೋತಿ ಭಾಗ-2-5,6,7,8 ನಿಯಮಗಳು’ (ಮುಂದುವರಿದ ಭಾಗ), ಬಿ ವಿ ತಿಪ್ಪೇಸ್ವಾಮಿ ಅವರಿಂದ ‘ದಿ ವಾಯ್ಸಾ ಆಫ್ ಸೈಲೆನ್ಸ್’ ಕುರಿತು ಉಪನ್ಯಾಸ. ಸ್ಥಳ: ಸಿಟಿ ಲಾಡ್ಜ್, ಕೆಆರ್ ರಸ್ತೆ. ಸೋಮವಾರ ನೆ.ರಾ.ಸುಬ್ಬರಾವ್ ಅವರಿಂದ ‘ತತ್ ತ್ವಮ್ ಅಶಿ’ ಕುರಿತು ಉಪನ್ಯಾಸ. ಸ್ಥಳ: ಮಲ್ಲೇಶ್ವರಂ ಲಾಡ್ಜ್, 8ನೆ ಅಡ್ಡರಸ್ತೆ, ಮಲ್ಲೇಶ್ವರಂ.

ಕಲಾಸಂಗಮ
ಬಾಷ್ ಲಲಿತ ಕಲಾ ಸಂಘ:
ಶನಿವಾರ ಡಾ. ಚೂಡಾಮಣಿ ನಂದಗೋಪಾಲ್ ಮತ್ತು ಕಥಕ್ ಗುರು ಚಿತ್ರ ವೇಣುಗೋಪಾಲ್ ಅವರಿಗೆ ಸನ್ಮಾನ. ನಂದಿನಿ ಮೆಹ್ತಾ, ಮುರಳಿ ಮೋಹನ್ ಮತ್ತು ಎನ್‌ಸೇಂಬಲ್ ತಂಡದಿಂದ ‘ಡ್ಯಾನ್ಸಸ್ ಆಫ್ ಇಂಡಿಯಾ’. ತಾಂಡವ ನೃತ್ಯ ತಂಡದಿಂದ ‘ನೃತ್ಯ ವೈಭವ. ಭಾನುವಾರ ಸಾಹಿತಿ ಬಾಬು ಕೃಷ್ಣಮೂರ್ತಿ ಮತ್ತು ಟಿ.ವಿ.ಶ್ರೀನಿವಾಸನ್ ಅವರಿಗೆ ಸನ್ಮಾನ. ಕರ್ನಾಟಕದ ವಿವಿಧ ಜಾನಪದ ನೃತ್ಯ ಸಂಗಮ.
ಸೋಮವಾರ ಹಾಸ್ಯ ಕಲಾವಿದ ಎಂ.ಎಸ್.ಉಮೇಶ್, ಡಾ.ಬಿ.ವಿ.ರಾಜಾರಾಂ ಅವರಿಗೆ ಸನ್ಮಾನ. ರಂಗ ಸಂಭ್ರಮ ತಂಡದಿಂದ ಹಾಸ್ಯ ನಾಟಕ ‘ಸಹಿ ರಿಸಹಿ’. ಸ್ಥಳ: ಬಾಷ್ ಕ್ರೀಡಾಂಗಣ, ಆಡುಗೋಡಿ. ನಿತ್ಯ ಸಂಜೆ 6.15.

ವಾರ್ಷಿಕೋತ್ಸವ
ಪ್ರತ್ಯಂಗರೀ ದೇವಿ ಟ್ರಸ್ಟ್:
ಶನಿವಾರ ಪ್ರತ್ಯಂಗರೀ ದೇವಿ ಮತ್ತು ಜ್ಞಾನಮುನೀಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ. ಸಂಜೆ 5ಕ್ಕೆ ಕಲಾ ಕದಂಬ ಆರ್ಟ್ಸ್ ಸೆಂಟರ್‌ನಿಂದ ‘ಚಂದ್ರಹಾಸ’ ಯಕ್ಷಗಾನ ಪ್ರಸಂಗ.  ಭಾನುವಾರ ಸೌಂದರ್ಯ ಲಹರಿ ಪಾರಾಯಣ. ರಾಜರಾಜೇಶ್ವರಿ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಗಾಯನ. ಕೇರಳದ ಚೆಂಡೆ.ಸ್ಥಳ: ಸುಬ್ರಹ್ಮಣ್ಯಪುರ, ತುರಹಳ್ಳಿ, ಉತ್ತರ ಹಳ್ಳಿ.

ಸಂಗೀತ
ತಿರುಮಲ ತಿರುಪತಿ ದೇವಸ್ಥಾನ ಹಿಂದೂ ಧರ್ಮ ಪ್ರಚಾರ ಪರಿಷತ್:
ಶನಿವಾರ ಕೇಶವದಾಸ ಸಂಗೀತ. ಸ್ಥಳ: ವಾಸವಿ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್. ಭಾನುವಾರ ಎಸ್.ಎಸ್. ಅನುಪಮ ಉಪನ್ಯಾಸ. ಸ್ಥಳ: ಟಿಟಿಡಿ ವೈಯಾಲಿಕಾವಲ್. ನಿತ್ಯ ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.