ಸುಧಾ ವಾಹಿನಿ ಕಲಾಕೇಂದ್ರ ತನ್ನ 11ನೇ ವಾರ್ಷಿಕೋತ್ಸವ ಹಾಗೂ ಡಾ. ವಿಷ್ಣುವರ್ಧನ್ ಸ್ಮರಣಾರ್ಥ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದೆ.
ಈ ಸಂದರ್ಭದಲ್ಲಿ ಪ್ರತಿಭೋತ್ಸವ ಹಾಗೂ ಬಾಲ ಕಲಾವಿದರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಮತ್ತು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಗಣ್ಯರಿಗೆ ಅಮೃತ ಬಿಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯನ, ನೃತ್ಯ, ಅಭಿನಯ, ವಾದ್ಯ ಹಾಗೂ ಮತ್ತಿತರ ಸ್ಪರ್ಧೆಗಳು ಇರುತ್ತವೆ. ಆಸಕ್ತರು ಪಾಲ್ಗೊಳ್ಳಬಹುದು.
ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಬೆಳಿಗ್ಗೆ 9 ರಿಂದ ಸಂಜೆ 6. ನೋಂದಣಿಗೆ: 97318 60539, 93412 36504.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.