ADVERTISEMENT

ಸಾಧನೆಗೆ ,ಉನ್ನತಿ ನೆರವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಸುಧಾ ಹಾಗೂ ಅಂಬಿಕಾ ಎರಡರ ಹರೆಯದಲ್ಲೇ ತಂದೆಯನ್ನು ಕಳೆದುಕೊಂಡ ನತದೃಷ್ಟರು. ಸಾಕಿ ಸಲಹುತ್ತಿದ್ದ ತಾಯಿ ಹಾಗೂ ಅಜ್ಜಿಯೂ ಅಕಾಲ ಮರಣಕ್ಕೊಳಗಾದ ಬಳಿಕ ನೆರೆಹೊರೆಯವರ ಪ್ರೀತಿಯಲ್ಲಿ ಬೆಳೆಯುತ್ತಿದ್ದರು.

 ಗುಲ್ಬರ್ಗಾ ಜಿಲ್ಲೆಯ ಕಾಲ್ಗಿ ಊರಿನವರಾದ ಈ ಎರಡು ಅನಾಥ ಜೀವಗಳ ಬದುಕಿಗೆ ಬೆಳಕು ಬೀರಿ ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತೆ ಮಾಡಿದ್ದು `ಉನ್ನತಿ~.

ಅವನ ಹೆಸರು ಕೃಷ್ಣ. ಆತನ ತಂದೆ ಬಡ ರೈತ. ತನ್ನ ಮೇಲೆ ಅವಲಂಬಿತವಾದ 5 ಜನರನ್ನು ಒಬ್ಬನ ದುಡಿಮೆಯಿಂದ ಸಲಹಬೇಕಾದ ಅನಿವಾರ್ಯತೆ. ಆರ್ಥಿಕ ಅಡಚಣೆಯಿಂದ 8ನೇ ತರಗತಿಗೇ ಓದು ನಿಲ್ಲಿಸಿ ಮನೆಮನೆಗೆ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡ. ಹೀಗೆ ಅರ್ಧಕ್ಕೆ ನಿಂತ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಹಾಯ ಮಾಡಿದ್ದು ಮತ್ತದೇ `ಉನ್ನತಿ~ ಸಂಸ್ಥೆ.

ಅದೊಂದು ಬಾರಿ ಖಾಸಗಿ ಚಾನೆಲ್‌ವೊಂದರ ಕಾರ್ಯಕ್ರಮ ನೋಡಿ ಉನ್ನತಿ ಸಂಸ್ಥೆಯನ್ನು ಸಂಪರ್ಕಿಸಿದೆ. ಸ್ಥಳೀಯ ಕಾಫಿ ಕೆಫೆಯಲ್ಲಿ ಕೆಲಸ ಮಾಡುತ್ತಾ ಓದು ಮುಗಿಸಿದ್ದೇನೆ. ಈಗ ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಬಲ್ಲೆ. ಕಾಫಿ ಡೇನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಶೆಫ್‌ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಭಕ್ತಿಗೀತೆಗಳ ಗಾಯನದ ಸೀಡಿಯೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇವಕ್ಕೆಲ್ಲ ಉನ್ನತಿ ನೀಡಿದ ಪ್ರೋತ್ಸಾಹವೇ ಕಾರಣ~ ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರ ಹನಿ.

ಸುಧಾ ಹಾಗೂ ಅಂಬಿಕಾ ಇಬ್ಬರೂ ಟಾಮ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈತುಂಬಾ ಸಂಬಳ ಪಡೆದು ಬದುಕಿನಲ್ಲಿ ನೆಲೆ ಕಂಡಿರುವ ಇವರ ಕಣ್ಣಲ್ಲೂ ಉನ್ನತಿ ಬಗ್ಗೆ ಕೃತಾರ್ಥ ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.