ADVERTISEMENT

ಸಿತಾರ್ ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಪ್ರೇಮಾಂಜಲಿ ಫೌಂಡೇಷನ್, ಪುರವಂಕರ ಪ್ರಾಜೆಕ್ಟ್ಸ್: ಮಂಗಳವಾರ ನಗರದ ಸಂಗೀತಪ್ರಿಯರಿಗೆ ನಿಜಕ್ಕೂ ರಸದೌತಣದ ದಿನ. ಖ್ಯಾತ ಸಿತಾರ್ ವಾದಕ ಭಾರತ ರತ್ನ ಪಂಡಿತ್ ರವಿಶಂಕರ್ ಮತ್ತು ಅನುಷ್ಕಾ ಶಂಕರ್ ಅವರಿಂದ ಸಿತಾರ್ ವಾದನ ಕಛೇರಿ ನಡೆಯಲಿದೆ.

ಬೆಂಗಳೂರಿನಲ್ಲಿ ರವಿಶಂಕರ್ ಅವರದು ಇದು ಕೊನೆಯ ಸಂಗೀತ ಕಛೇರಿ.
ಹಾಗಾಗಿ ಇದಕ್ಕೆ ಇನ್ನಿಲ್ಲದ ಮಹತ್ವ. ಪ್ರೇಮಾಂಜಲಿ ಫೌಂಡೇಷನ್‌ನ ಏಳನೇ ವರ್ಷದ ಪ್ರೇಮಾಂಜಲಿ ಉತ್ಸವದ ಅಂಗವಾಗಿ ಈ ವಿಶಿಷ್ಟ, ಅಪರೂಪದ ಸಂಗೀತ ಕಛೇರಿ ಆಯೋಜಿಸಲಾಗಿದೆ.

ಭಾರತೀಯ ಸಂಗೀತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ರವಿಶಂಕರ್ ಅವರು ನಗರದಲ್ಲಿ ನಡೆಸಿಕೊಡಲಿರುವ ಕೊನೆಯ ಕಛೇರಿ ಇದಾಗಿರುವುದರಿಂದ `ಫೇರ್‌ವೆಲ್ ಟು ಬೆಂಗಳೂರು~ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಿಂದ ಬರುವ ಹಣವನ್ನು ಫೌಂಡೇಷನ್ ದುರ್ಬಲ ಮಕ್ಕಳ ನೆರವಿಗೆ ಬಳಸಲಿದೆ.
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಮೇಖ್ರಿ ಸರ್ಕಲ್. ಸಂಜೆ 7.30. ಮಾಹಿತಿಗೆ 99801 88938, 98803 07376.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.