ADVERTISEMENT

ಸಿಲ್ಕಿ ಫ್ಯಾಷನ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಫ್ಯಾಷನ್ ಮತ್ತು ಸಮಕಾಲೀನ ಉಡುಗೆ ತೊಡುಗೆಗಳಿಗೆ ಹೆಸರಾದ ರಿಚ್ಮಂಡ್ ರಸ್ತೆಯ ಸಮ್ಯಖ್‌ನಲ್ಲಿ ನಡೆದ `ಫ್ಯಾಷನ್ ಫಾರ್ ಫ್ಯಾಷನಿಸ್ತಾನ್~, ನೀಮಾ ಕುಮಾರ್ ಮತ್ತು ಗೋವಿಂದ ಕುಮಾರ್ ಸಿಂಗ್ ರೂಪಿಸಿದ ಹೊಸ ಹೊಸ ಡಿಸೈನರ್ ಉಡುಪುಗಳನ್ನು ಪರಿಚಯಿಸಿತು.

ಇವುಗಳನ್ನು ತೊಟ್ಟು ಚಿತ್ರ ತಾರೆ ಹರ್ಷಿಕಾ ಪೂಣಚ್ಚ ಮತ್ತು ಶಿರಿನ್ ರ‌್ಯಾಂಪ್ ಮೇಲೆ ಬಂದಾಗ ಚಪ್ಪಾಳೆ ಮೊಳಗಿತು. ರೂಪದರ್ಶಿಗಳ ಬಳುಕು ಬಿನ್ನಾಣದ ನಡಿಗೆ ಇಡೀ ಫ್ಯಾಷನ್ ಶೊಗೆ ರಂಗು ತುಂಬಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.