ADVERTISEMENT

ಸುಗಮ ಸಂಗೀತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬನಶಂಕರಿ 3ನೇ ಹಂತ, ಎಸ್‌ಬಿಎಂ ಕಾಲೊನಿಯ ಅರವಿಂದ ಕಲಾವೃಂದವು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುಗಮ ಸಂಗೀತ ಮಹೋತ್ಸವ ಆಯೋಜಿಸಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಸುಬ್ಬಣ್ಣ ಅವರು ಸುಗಮ ಸಂಗೀತಕ್ಕೆ ಹೆಚ್ಚು ಅರ್ಥ ಬರುವಂತೆ ಮಾಡಿದ ಗಾಯಕರನ್ನು ನೆನಪಿಸಿಕೊಂಡರು. ಗಾಯನದ ಮೂಲಕ ಸಂಗೀತಾಸಕ್ತರನ್ನು ರಂಜಿಸಿದರು. ಬಾನಂದೂರು ಕೆಂಪಯ್ಯ ಅವರು ‘ಇನ್ನೆಲ್ಲಿ ನೋಡಲಿಂಥ ಬಳೆಯ ಬಳೆಗಾರ ಶೆಟ್ಟಿ’ ಗೀತೆಯನ್ನು ಹಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್‌. ರಾಮಕೃಷ್ಣ, ಸಾಹಿತಿ ಡಾ.ದೊಡ್ಡರಂಗೇಗೌಡ,  ಶಂಖನಾದ ಅರವಿಂದ್‌ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎಲ್‌.ಎ. ರವಿಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. 

ಎರಡನೇ ದಿನ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ, ಸಂಗೀತ ನಿರ್ದೇಶಕ ವಿ.ಮನೋಹರ್‌, ನಟ ರಮೇಶ ಭಟ್‌ ಅವರನ್ನು ಸನ್ಮಾನಿಸಲಾಯಿತು.

ವೆಂಕಟೇಶ್‌, ಶ್ರೀನಿವಾಸಮೂರ್ತಿ, ಅರ್ಚನಾ ರವಿ, ಡಾ.ಚಂದ್ರಶೇಖರ್‌ ಹಾಲೊಳ್ಳಿ, ಪ್ರಾರ್ಥನಾ ಕಿರಣ್‌, ರಮಾ ಅರವಿಂದ್, ಶ್ವೇತಾ ಪ್ರಭು, ರಜನಿ, ರವಿ ಸಂತೋಷ್‌, ಮಂಜು, ಕಿರಣ್‌ ಅವರ ಸಮೂಹ ಗಾಯನ ಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.