ADVERTISEMENT

ಸುಜಿತ್ ಭರತನಾಟ್ಯ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ನಾಟ್ಯ ವಿದುಷಿ ಪ್ರೊ.ಜಯ ಅವರ ಶಿಷ್ಯ ಯು.ಆರ್. ಸುಜಿತ್ ಸುಬ್ರಹ್ಮಣ್ಯ ಅವರ ಭರತನಾಟ್ಯ ರಂಗಪ್ರವೇಶ ಶುಕ್ರವಾರ ನಡೆಯಲಿದೆ.

ತಮ್ಮ ಏಳನೇ ವಯಸ್ಸಿನಿಂದಲೇ ನಾಟ್ಯಾಭ್ಯಾಸದಲ್ಲಿ ತೊಡಗಿದ ಅವರು ತಂದೆ ಯು.ಎಸ್.ರಮೇಶ್ ಅವರಿಂದ ಭರತನಾಟ್ಯದ ಪ್ರಥಮ ಪಾಠ ಕಲಿತರು. ಪ್ರಸ್ತುತ ಕೆ.ಆರ್. ಪುರಂನ ನವದೀಪ್ ಇಂಗ್ಲಿಷ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಸುಜಿತ್ 30ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿರುವ ಇವರು ಭರತನಾಟ್ಯದ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ.ಜಯಾ ಸುಜಿತ್ ಅವರ ಗುರು.

ಕಾರ್ಯಕ್ರಮದಲ್ಲಿ ರಾಮು ಕಣಗಾಲ್, ಹರೀಶ್, ಡಿ.ಪ್ರಕಾಶ್, ಭೀಮಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಲವ್ಲೀ ಭೀಮಯ್ಯ ಅಧ್ಯಕ್ಷತೆ ವಹಿಸುವರು.
ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. ಸಂಜೆ 5ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.