ADVERTISEMENT

ಸೈಕಲ್ ಸವಾರಿ ಮಾಲಿನ್ಯಕ್ಕೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST
ಸೈಕಲ್ ಸವಾರಿ ಮಾಲಿನ್ಯಕ್ಕೆ ಕತ್ತರಿ
ಸೈಕಲ್ ಸವಾರಿ ಮಾಲಿನ್ಯಕ್ಕೆ ಕತ್ತರಿ   

ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣ ಹಾಗೂ ನಗರದಲ್ಲಿ ಹಸಿರು ಹೆಚ್ಚಿಸಲು ಇರುವ ಪರ್ಯಾಯ ಮಾರ್ಗ ಸೈಕಲ್ ಬಳಕೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಟಿಓ ಬೆಂಗಳೂರು ಟಿಐ ಸೈಕಲ್ಸ್ ಇಂಡಿಯಾ (ಬಿಎಸ್‌ಎ ಮತ್ತು ಹರ್ಕ್ಯುಲಸ್ ಬ್ರಾಂಡ್‌ಗಳು) ಸೈಕಲ್ ರ‌್ಯಾಲಿಯನ್ನು ಏರ್ಪಡಿಸಿತ್ತು.

ಕಂಠೀರಿವ ಸ್ಟೇಡಿಯಂನಿಂದ ಪ್ರಾರಂಭಗೊಂಡ ಸೈಕಲ್ ರ‌್ಯಾಲಿ ಎಂಜಿ ರಸ್ತೆ ಮೂಲಕ ಸಾಗಿ ಹಲಸೂರು ಕೆರೆ ಬಳಿ ಮುಕ್ತಾಯಗೊಂಡಿತು. ರಸ್ತೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಕೆ.ಆರ್. ಶ್ರೀನಿವಾಸ್ ಅವರು ಚಾಲನೆ ನೀಡಿದರು.
ಬೆಂಗಳೂರು ನಗರದಲ್ಲಿ ವಾಹನಗಳ ಹೊಗೆ ವಿಪರೀತ ಹೆಚ್ಚಿದೆ. ಇದರ ಜತೆಗೆ ಮಾಲಿನ್ಯದ ಪ್ರಮಾಣ ಅಳತೆಗೆ ಸಿಗದಷ್ಟಾಗಿದೆ.

ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಮಿತಿ ಮೀರಿದ ವಾಹನಗಳ ಬಳಕೆಯಿಂದಾಗಿ ಪರಿಸರ ಹಾಳಾಗುತ್ತಿದೆ. ಇದಕ್ಕೆಲ್ಲಾ ಪರ್ಯಾಯ ಮಾರ್ಗ ಸೈಕಲ್ ಸವಾರಿ ಒಂದೇ. ಆದಷ್ಟು ಎಲ್ಲರೂ ಸೈಕಲ್ ಬಳಕೆ ಮಾಡಬೇಕು ಎಂಬ ಸಂದೇಶ ಸಾರುವುದು ಈ ರ‌್ಯಾಲಿ ಹಿಂದಿನ ಉದ್ದೇಶವಾಗಿತ್ತು.ರ‌್ಯಾಲಿಯಲ್ಲಿ ಸಾವಿರಾರು ಮಂದಿ ಉತ್ಸಾಹಿಗಳು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.