ಈ ವರ್ಷ ಸೈಫ್ ಅಲಿ ಖಾನ್, ಕರೀನಾ ಕಪೂರ್ ಮದುವೆಯಾಗಲಿದ್ದಾರೆ ಎಂಬುದು 2012ರ ಆರಂಭದಿಂದಲೇ ಕೇಳಿ ಬರುತ್ತಿದ್ದ ಸುದ್ದಿ.
`ಸೈಫೀನಾ~ ಮದುವೆ ಬಗ್ಗೆ ಕೇಳಿದಾಗಲೆಲ್ಲ ಶರ್ಮಿಳಾ ಟ್ಯಾಗೋರ್ ಹಾಗೂ ಸೋಹಾ ಅಲಿಖಾನ್ ಅಕ್ಟೋಬರ್ 16 ಎಂದು ಹೇಳಿದ್ದಾರೆ. ಜೆನೆಲಿಯಾ ಹಾಗೂ ರಿತೇಶ್ ಮದುವೆ ಸಂದರ್ಭದಲ್ಲಿಯೇ ದಿಯಾ ಮಿರ್ಜಾ, ಕರೀನಾ ಕಪೂರ್ ಮದುವೆ ಬಗ್ಗೆಯೂ ಚರ್ಚೆ ಜೋರಾಗಿತ್ತು.
ದಿಯಾ ಈ ವರ್ಷ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಕರೀನಾ ಈ ವರ್ಷದ ಪ್ರಾಜೆಕ್ಟ್‌ಗಳನ್ನು ಮುಗಿಸುವತ್ತ ಹಾಗೂ ಕೆರಿಯರ್‌ನತ್ತ ಗಮನ ನೀಡಿರುವುದಾಗಿ ತಿಳಿಸಿದ್ದರು. ಮದುವೆಯ ಬಗ್ಗೆ ಅವಸರವೇನಿಲ್ಲ ಎಂದೂ ಹೇಳಿದ್ದರು.
ಆದರೆ ಸೈಫ್ ಅಲಿ ಖಾನ್ ಪ್ರೀತಿಯ ಬಗ್ಗೆ ತಮಗೆ ಕೆಲವೊಮ್ಮೆ ಅಸುರಕ್ಷಿತ ಭಾವ ಕಾಡುತ್ತದೆ ಎಂದೂ ಹೇಳಿದ್ದರು. ಆದರೆ ಬುಧವಾರ ನವದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಕರೀನಾಗೆ ಮದುವೆ ಬಗ್ಗೆ ಕೇಳಿದರೆ `ನೊ ಕಮೆಂಟ್ಸ್~ ಎಂದು ಉಲಿದಿದ್ದಾರೆ. ಇನ್ನೂ ಕೆದಕಲು `ನಿಮ್ಮ ಬ್ರೈಡಲ್ ವೇರ್ ಅರಸುತ್ತಿರುವಿರಾ?~ ಎಂದು ಮಾಧ್ಯಮದವರು ಕೆಣಕಿದಾಗ, `ಈ ಪ್ರಶ್ನೆಗೆ ಉತ್ತರಿಸುವ ಯಾವ ಆಸಕ್ತಿಯೂ ನನಗಿಲ್ಲ~ ಎಂದು ಬಿಡುಬೀಸಾಗಿ ಬೇಬೊ ಉತ್ತರಿಸಿದ್ದಾರೆ.
ಇತ್ತ ಸೈಫ್ ಮಾತ್ರ `ಕಾಕ್‌ಟೇಲ್~ ಚಿತ್ರದ ಚಿತ್ರೀಕರಣದಲ್ಲೆಲ್ಲ ತಮ್ಮ ಯೋಗದ ಮ್ಯಾಟ್ ಹಿಡಿದುಕೊಂಡು ಅಡ್ಡಾಡುತ್ತಿದ್ದಾರೆ. ಸಮಯ ಹಾಗೂ ಅವಕಾಶ ಸಿಕ್ಕಲ್ಲೆಲ್ಲ ಯೋಗದಲ್ಲಿ ನಿರತರಾಗುತ್ತಿದ್ದಾರಂತೆ. ಅಷ್ಟೇ ಅಲ್ಲ, ದೀಪಿಕಾ ಹಾಗೂ ಡಯಾನಾ ಪೆಂಟಿ ಅವರಿಗೂ ಸೆಟ್‌ಗಳಲ್ಲಿ ಯೋಗ ಹೇಳಿಕೊಡುತ್ತಿದ್ದಾರಂತೆ. ಅವರೂ ಅಷ್ಟೇ ಉತ್ಸಾಹದಿಂದ ಸೈಫ್‌ನನ್ನು ಗುರುವೆಂದು ಒಪ್ಪಿಕೊಂಡಿದ್ದಾರಂತೆ. ಇವರಿಬ್ಬರ ಮದುವೆಯ ಯೋಗಾಯೋಗ ಮಾತ್ರ ಯಾವಾಗ ಕೂಡಲಿದೆಯೋ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.