ಅಂದು ಹೆಸರಘಟ್ಟ ರಸ್ತೆ ನಾಗಸಂದ್ರದ ಹಾವನೂರು ಬಡಾವಣೆಯ ಸೌಂದರ್ಯ ಶಾಲೆಯಲ್ಲಿ ಪುಟಾಣಿಗಳ ಕಲರವ. ಅವರೆಲ್ಲಾ ಕಪ್ಪು ಕೋಟು, ಟೋಪಿ ತೊಟ್ಟು ಬೀಳ್ಕೊಡುಗೆ ಮತ್ತು ಪದವಿ ಪ್ರದಾನ ದಿನದ ಸಂಭ್ರಮದಲ್ಲಿದ್ದರು. ಚಿಕ್ಕ ಮಕ್ಕಳಲ್ಲಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಧೈರ್ಯ ತುಂಬುವುದು, ಜೊತೆಗೆ ಪೋಷಕರಿಗೆ ತಮ್ಮ ಮಕ್ಕಳ ಮನಸ್ಸನ್ನು ಅರಿತು ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸಲು ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಅತಿಥಿಯಾಗಿದ್ದ ಉದ್ಯಮಿ ಶಾಲಿನಿ ಮೂರ್ತಿ ಮಾತನಾಡಿ ‘ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀಳದಂತೆ ಶಿಕ್ಷಣವನ್ನು ರೂಪಿಸಬೇಕು’ ಎಂದರು.
ಶಾಲಾ ವ್ಯವಸ್ಥಾಪಕ ಕಾರ್ಯದರ್ಶಿ ಸೌಂದರ್ಯ ಪಿ. ಮಂಜಪ್ಪ, ಸಹಕಾರ್ಯದರ್ಶಿ ಸುನೀತ ಮಂಜಪ್ಪ, ಕೀರ್ತನ್ ಕುಮಾರ್, ನರ್ಸರಿ ಶಾಲಾ ಮುಖ್ಯ ಶಿಕ್ಷಕಿ ಕ್ವೀನ್ ಮೇರಿ ಸಿಂಗ್. ಚಿನ್ನಮ್ಮ ಕಾವೇರಪ್ಪ, ಕುಮುದ, ಪಾರ್ಥಸಾರಥಿ ಕೆ. ಅಯ್ಯಂಗಾರ್, ಪಿ.ಬಿ.ಗಣೇಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.