ADVERTISEMENT

ಸೌರವನದಲ್ಲಿ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST
ಸೌರವನದಲ್ಲಿ ವಿದ್ಯುತ್
ಸೌರವನದಲ್ಲಿ ವಿದ್ಯುತ್   

ಇದೊಂದು ವನ. ನೋಡಲಿಕ್ಕೆ ಥೇಟ್ ಗಿಡಮರಗಳ ಕಾಡಿನಂತೆ ಕಂಡರೂ ಇದು ವನವಲ್ಲ. ಇದರ ಹೆಸರು ಸೌರವನ. ಇಲ್ಲಿರುವುದು ಬರೀ ಸೌರ ಮರಗಳು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೂರ್ಯನ ಶಾಖವನ್ನು ವಿವಿಧ ಬಗೆಗಳಲ್ಲಿ ಬಳಸಿಕೊಳ್ಳಲು ಕಂಡುಕೊಂಡಿರುವ ಮಾರ್ಗ ಇದು.

ಸೌರವನದಲ್ಲಿ 10 ರಿಂದ 12 ಅಡಿಗಳ ಅಂತರದಲ್ಲಿ ಸಾಲುದ್ದ ಸೌರ ಮರಗಳನ್ನು ಸ್ಥಾಪಿಸಲಾಗುತ್ತದೆ. ಇವುಗಳ ಮಧ್ಯೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗುತ್ತದೆ. ಪ್ರತಿಯೊಂದು ಮರದ ಕೆಳಗೆ ಕಾರ್ ಸೇರಿದಂತೆ ಇತರೆ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿ ಅವುಗಳಿಗೆ ಸೌರವಿದ್ಯುತ್ ಪೂರೈಸಲಾಗುತ್ತದೆ. ಮೊಬೈಲ್ ಚಾರ್ಜರ್ ಮಾದರಿಯಲ್ಲಿ ಇವುಗಳು ಕಾರ್ಯನಿರ್ವಹಿಸುತ್ತವೆ. ವಿಶೇಷ ಎಂದರೆ ಇಲ್ಲಿ ಕಡಿಮೆ ಬಿಸಿಲಿದ್ದರೂ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಜರ್ಮನಿ ಸೇರಿದಂತೆ ಯೂರೋಪಿನ ಅನೇಕ ರಾಷ್ಟ್ರಗಳು ಸೌರವನಗಳ ಪರಿಕಲ್ಪನೆಯನ್ನು ಈಗಾಗಲೇ ಅಳವಡಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿವೆ. ಭಾರತದ ಮಟ್ಟಿಗೆ ಇದು ಹೊಸದು. ಇಂತಹದ್ದೊಂದು ಸೌರವನ ಶೀಘ್ರವೇ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಘಟಕ ಸ್ಥಾಪಿಸುವ ಕುರಿತು ಸೂಕ್ತ ಸ್ಥಳದ ಪರಿಶೀಲನೆ ನಡೆಸಲಾಗುತ್ತಿದೆ.

ಈ ಸೌರವನದ ಮಾದರಿ ತುಮಕೂರು ರಸ್ತೆ ನೈಸ್ ರಸ್ತೆಯಲ್ಲಿರುವ ಬೆಂಗಳೂರು ಅಂತರ್ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿರುವ ‘ಭಾರತದಲ್ಲಿ ಶಕ್ತಿ ಮತ್ತು ವಿದ್ಯುತ್’ ಕುರಿತ ಪ್ರದರ್ಶನದ ಪ್ರಮುಖ ಆಕರ್ಷಣೆ.ಫೆ. 14ರ ವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ವಿದ್ಯುತ್ ಉಪಕರಣ, ನವೀಕರಿಸಬಲ್ಲ ಶಕ್ತಿ ಮತ್ತು ಬೆಳಕಿನ ವ್ಯವಸ್ಥೆಯ ವಿವಿಧ ಬಗೆಗಳು, ದೇಶ ವಿದೇಶದ ವಿದ್ಯುತ್ ಕಂಪೆನಿಯ ಅತ್ಯಾಧುನಿಕ ಸಾಮಗ್ರಿಗಳನ್ನು ನೋಡಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.