ADVERTISEMENT

ಸೌರಾಷ್ಟ್ರ ಕಲಾ ಮೇಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಸೌರಾಷ್ಟ್ರ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಸಂಸ್ಥೆ ಭಾನುವಾರದವರೆಗೆ (ಅ.14) ಕೈಮಗ್ಗ ಹಾಗೂ ಕರಕುಶಲ ಮೇಳವನ್ನು ಆಯೋಜಿಸಿದೆ.

ಕಲಾವಿದರು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಸೌರಾಷ್ಟ್ರ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಸಂಸ್ಥೆ  ಮೇಳ ಹಮ್ಮಿಕೊಂಡಿದೆ. ಗುಜರಾತ್ ಕಲಾವಿದರಷ್ಟೇ ಅಲ್ಲದೇ ದೇಶದ ವಿವಿಧ ರಾಜ್ಯಗಳ ಕಲಾವಿದರ, ಕುಶಲಕರ್ಮಿಗಳ ಉತ್ಪನ್ನಗಳು ಇಲ್ಲಿ ಲಭ್ಯ.

ಜೈಪುರದ ಆಲಂಕಾರಿಕ ಒಡವೆಗಳು, ರಾಜಸ್ತಾನಿ ಪೇಂಟಿಂಗ್ಸ್, ಜೋಧ್‌ಪುರದ ಮರದ ಪೀಠೋಪಕರಗಳು, ಒಡಿಶಾ ಪೇಂಟಿಂಗ್ಸ್, ಮತ್ತು ಆಗ್ರಾದ ಕಲ್ಲಿನ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ.

ಇವಿಷ್ಟೇ ಅಲ್ಲದೇ ಗುಜರಾತಿನ ಬೆಡ್ ಸ್ಪೆರ್ಡ್ಸ್, ಹೈದರಬಾದಿನ ಬಣ್ಣ ಬಣ್ಣದ ಹತ್ತಿ ಸೀರೆಗಳು, ಉತ್ತರ ಪ್ರದೇಶದ ವಸ್ತ್ರಗಳು, ಬನಾರಸ್, ಬಂಗಾಳದ ಸೀರೆಗಳು ಹೆಂಗಳೆಯರ ಗಮನ ಸೆಳೆಯುತ್ತಿವೆ. ಜೊತೆಗೆ ದಕ್ಷಿಣ ಭಾರತದ ಕಾಟನ್ ಸೀರೆಗಳು ಇವೆ. ಈ ಎಲ್ಲಾ ಉತ್ಪನ್ನಗಳ ಮೇಲೂ ಶೇ.10ರಷ್ಟು ರಿಯಾಯಿತಿ ಇದೆ.

ಸ್ಥಳ: ಶ್ರೀನಿವಾಸ ಕಲ್ಯಾಣ ಸಾಗರ್ ಮಹಲ್, ಅಶೋಕ ಪಿಲ್ಲರ್ ಸಮೀಪ, ಜಯನಗರ. ಮಾಹಿತಿಗೆ: 95354 21179/81449 70045  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.