ADVERTISEMENT

ಹರಿಕಥಾ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಕರ್ನಾಟಕದಲ್ಲಿ ಹರಿಕಥಾ ಪ್ರಕಾರಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಹರಿಕಥೆಯ ಮಹಿಮೆ, ಹಿರಿಮೆ, ಲೋಕಪ್ರಿಯತೆ ಎಲ್ಲರಿಗೂ ತಿಳಿದೇ ಇದೆ. ಅವಗಣನೆಗೆ ಗುರಿಯಾಗುತ್ತಿರುವ ಪ್ರಕಾರಗಳಲ್ಲಿ ಹರಿಕಥೆಯೂ ಒಂದು.

ಹರಿಕಥೆ ಎಂದರೆ ಸಾವಿರಾರು ಜನರು ಸೇರುತ್ತಿದ್ದ ಕಾಲವೊಂದಿತ್ತು, ಈಗಲೂ ಜನ ಸೇರುತ್ತಾರಾದರೂ ಆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಲ. ಈ ಪ್ರಾಚೀನ ಕಲೆಯನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ನಗರದ ಷಡ್ಜ ಕಲಾಕೇಂದ್ರ, ಕರ್ನಾಟಕ ಕೀರ್ತನಾ ಕಲಾ ಪರಿಷತ್ತಿನ ಸಹಯೋಗದೊಂದಿಗೆ ಇದೇ ಜನವರಿ 8ರಂದು ಭಾನುವಾರ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 6.30ರವರೆಗೆ ಈ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ಸಂತ ಹಾಗೂ ಖ್ಯಾತ ಕೀರ್ತನಕಾರರಾದ ಭದ್ರಗಿರಿ ಅಚ್ಯುತದಾಸರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ನಾನಾ ಮೂಲೆಗಳಿಂದ ಖ್ಯಾತ ಕೀರ್ತನಕಾರರು ಒಂದೆಡೆ ಸೇರಲಿದ್ದಾರೆ ಎಂದು ಕೀರ್ತನಾಚಾರ್ಯ ಲಕ್ಷ್ಮಣ್‌ದಾಸ್ ವೇಲಣಕರ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 080-23341886 ಅಥವಾ 8861102949 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.