ADVERTISEMENT

ಹರ್ಬ್‌ಲೈಫ್‌ನಲ್ಲಿ ದೀಪಿಕಾ ಪಲ್ಲಿಕಲ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ವಿಶ್ವದ 15ನೇ ಶ್ರೇಯಾಂಕದ ಸ್ಕ್ವಾಶ್ ಚಾಂಪಿಯನ್ ದೀಪಿಕಾ ಪಲ್ಲಿಕಲ್ ಹರ್ಬ್‌ಲೈಫ್‌ನ ನೂತನ ರಾಯಭಾರಿಯಾಗಿದ್ದಾರೆ. ಇವರು ಹರ್ಬ್‌ಲೈಫ್‌ನ ಶಕ್ತಿ ಉತ್ಪನ್ನಗಳಾದ ಫಾರ್ಮುಲಾ 1 ನ್ಯೂಟ್ರೀಶನಲ್ ಶೇಕ್ ಮಿಕ್ಸ್, ಕೇಶ ರಕ್ಷಣೆ ಉತ್ಪನ್ನಗಳಾದ ಹರ್ಬಲ್ ಆಲೋವೇರಾ ಸತ್ವವನ್ನು ಒಳಗೊಂಡ ಶಾಂಪೂ ಮತ್ತು ಕಂಡೀಶನರ್ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. 

ಐದು ಬಾರಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೊಮ್, ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಈ ಹಿಂದೆ ಹರ್ಬ್‌ಲೈಫ್ ಜೊತೆ ಕೈಜೋಡಿಸಿದ್ದ ಜನಪ್ರಿಯ ಕ್ರೀಡಾ ಪ್ರತಿಭೆಗಳು.

20ನೇ ವಯಸ್ಸಿನಲ್ಲಿಯೇ ವಿಶ್ವ ಸ್ಕ್ವಾಶ್ ಶ್ರೇಯಾಂಕದಲ್ಲಿ 15ನೇ ಸ್ಥಾನ ಅಲಂಕರಿಸಿರುವ ದೀಪಿಕಾ, 2012ರ ಅಂತ್ಯಕ್ಕೆ ಮುನ್ನ 10ನೇ ಅಗ್ರ ಪಟ್ಟದೊಳಗಿನ ಸ್ಥಾನಕ್ಕೆ ಬಡ್ತಿ ಪಡೆಯುವ ವಿಶ್ವಾಸ ಹೊಂದಿದ್ದಾರೆ. ವಿಶ್ವದ 20ನೇ ಶ್ರೇಯಾಂಕವನ್ನು ಪಡೆಯುತ್ತಿರುವ ಭಾರತದ ಮೊದಲ ಸ್ಕ್ವಾಶ್ ಆಟಗಾರ್ತಿ ಎಂಬ ಅಗ್ಗಳಿಕೆ ಕೂಡ ಇವರಿಗಿದೆ. ಇವರು ವಿಶ್ವ ಸ್ಕ್ವಾಶ್ ಕಿರಿಯರ ವಲಯದಲ್ಲಿ ಡಚ್ ಓಪನ್, ಜರ್ಮನ್ ಓಪನ್, ಫ್ರೆಂಚ್ ಓಪನ್, ಆಸ್ಟ್ರೇಲಿಯಾ ಓಪನ್ ಮತ್ತು ಸ್ಕಾಟಿಷ್ ಓಪನ್‌ನಲ್ಲಿ  ಜಯಗಳಿಸಿದ್ದಾರೆ. ಹಿರಿಯರ ವಲಯಕ್ಕೆ ಪ್ರವೇಶ ಪಡೆದ ಬಳಿಕ ದೀಪಿಕಾ 2010 ನವೆಂಬರ್‌ನಲ್ಲಿ ನೇಪಾಳ್ ಓಪನ್ ಮತ್ತು 2011ರ ಸೆಪ್ಟೆಂಬರ್‌ನಲ್ಲಿ ಆರೇಂಜ್ ಕೌಂಟಿ ಓಪನ್ (ಅಮೆರಿಕ)ನಲ್ಲೂ ಗೆಲುವು ಸಾಧಿಸಿದ್ದಾರೆ.

`ಹರ್ಬ್‌ಲೈಫ್‌ನಂತಹ ಜಾಗತಿಕ ಪೌಷ್ಟಿಕ ಆಹಾರ ಉತ್ಪಾದನಾ ಕಂಪೆನಿಯ ಜೊತೆ ಕೈಜೋಡಿಸುತ್ತಿರುವುದು ಒಂದು ಗೌರವ ಎಂದು ಭಾವಿಸಿದ್ದೇನೆ. ಹರ್ಬ್‌ಲೈಫ್ ಸಂಸ್ಥೆಯ ಕ್ರೀಡಾ ಕ್ಷೇತ್ರದ ಸಂಬಂಧದ ಬಗ್ಗೆ ನನಗೆ ಅರಿವಿದೆ. ಜಾಗತಿಕ ಮಟ್ಟದಲ್ಲಿ ಹರ್ಬಲೈಫ್ ಪ್ರತಿನಿಧಿಸಲು ಅಥ್ಲೀಟ್‌ಗಳ ಈ ಆಯ್ದ ಗುಂಪಿನಲ್ಲಿ ನಾನಿರುವುದು ಹೆಮ್ಮೆಯ ಸಂಗತಿ. ಒಬ್ಬ ವ್ಯಕ್ತಿಯ ವೃತ್ತಿ ಹಾಗೂ ಖಾಸಗಿ ಬದುಕಿನ ಉನ್ನತ ಮಟ್ಟದ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸಮರ್ಪಕ ಆಹಾರ ಮತ್ತು ಕ್ರಿಯಾಶೀಲತೆ ಅಗತ್ಯ ಎಂಬ ಹರ್ಬ್‌ಲೈಫ್ ಸಿದ್ಧಾಂತದಲ್ಲಿ ನನಗೆ  ನಂಬಿಕೆ~ ಇದೆ ಎಂದರು ದೀಪಿಕಾ ಪಲ್ಲಿಕಲ್.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.