ADVERTISEMENT

‘ಚಿತ್ರ’ದರ್ಶಿ ರಾಮು

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 20:30 IST
Last Updated 1 ಜನವರಿ 2014, 20:30 IST
ಆಹಾರದ ಹುಡುಕಾಟದಲ್ಲಿ ಆಶಿ ಪ್ರಿನಿಯಾ ಹಕ್ಕಿ
ಆಹಾರದ ಹುಡುಕಾಟದಲ್ಲಿ ಆಶಿ ಪ್ರಿನಿಯಾ ಹಕ್ಕಿ   

ಉತ್ತಮ ಛಾಯಾಗ್ರಾಹಕ, ನುರಿತ ಕಲಾವಿದನಂತೆ ಸೂಕ್ಷ್ಮಗ್ರಾಹಿ. ವೃತ್ತಿಪರ ಕಲಾವಿದರಾಗಿ ಹೆಸರು ಗಳಿಸಿರುವ ರಾಮು ಎಂ. ಎಂಬ ಬೆಂಗಳೂರಿನ ಯುವಕ ಹವ್ಯಾಸಿ ಛಾಯಾಗ್ರಾಹಕನೂ ಆಗಿರುವುದು ಕಾಕತಾಳೀಯ.

ಜಗತ್ತನ್ನು ಕಾಣುವ ಸೂಕ್ಷ್ಮಸಂವೇದನೆಯ ನೋಟದಿಂದಾಗಿ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ವಿಶ್ವದ ಛಾಯಾಗ್ರಹಣ ಕ್ಷೇತ್ರದಲ್ಲಿ ಪ್ರತಿಷ್ಠಿತ ಎಂದು ಪರಿಗಣಿಸಲಾಗುವ ಮತ್ತು ಯುನೆಸ್ಕೊ ಮಾನ್ಯತೆ ಪಡೆದ ಏಕೈಕ ಛಾಯಾಗ್ರಹಣ ಸಂಸ್ಥೆಯಾದ ಫ್ರಾನ್ಸ್‌ನ ಫೆಡರೇಶನ್ ಇಂಟರ್‌ ನ್ಯಾಷನಲ್ ಡೆ ಲಾ ಆರ್ಟ್ ಫೋಟೋಗ್ರಾಫಿಕ್ (ಇಎಫ್‌ಐಎಪಿ) ನಡೆಸುವ ಸ್ಪರ್ಧೆಯಲ್ಲಿ ಈ ಬಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಾಮು ಭಾಗವಹಿಸಿದ್ದ ‘ನೇಚರ್ ವರ್ಲ್ಡ್ ಕಪ್’ನಲ್ಲಿ ಭಾರತಕ್ಕೆ ಸುವರ್ಣ ಪದಕ ಬಂದಿದ್ದು, ಲಂಡನ್‌ನ ಪ್ರತಿಷ್ಠಿತ ರಾಯಲ್‌ ಫೋಟೊಗ್ರಾಫಿಕ್ ಸೊಸೈಟಿಯ ಪ್ರಶಸ್ತಿ ಅಲ್ಲದೆ, ನಮ್ಮದೇ ರಾಜ್ಯದ ‘ಅಸ್ಕರಿ ಪ್ರಶಸ್ತಿ’ಯೂ ಅವರಿಗೆ ಸಂದಿದೆ. ರಾಮು ಅವರು ಪ್ರಸ್ತುತ ಡೆಕ್ಕನ್‌ ಹೆರಾಲ್ಡ್ ಪತ್ರಿಕೆಯಲ್ಲಿ ಕಲಾವಿದರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.