ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಾಲ್ ಸಂಪ್ರದಾಯವನ್ನು ಪರಿಚಯಿಸಿದ ಫೋರಂ ಮಾಲ್, ಇಂದಿಗೂ ದೊಡ್ಡ ಪ್ರಮಾಣದ
 ಗ್ರಾಹಕರನ್ನು ಆಕರ್ಷಿಸುತ್ತಿದೆ.  ಫೋರಂ ಮಾಲ್ ಇತ್ತೀಚೆಗೆ ತನ್ನ ದಶಮಾನೋತ್ಸವವನ್ನು ಆಚರಿಸಿಕೊಂಡಿತು.
 
 ಈ ಸಂದರ್ಭವನ್ನು ಅರ್ಥಪೂರ್ಣವಾಗಿಸುವ ಸಲುವಾಗಿ ಹತ್ತು ಬಡಮಕ್ಕಳಿಗೆ, ಮುಂದಿನ ಹತ್ತು ವರ್ಷಗಳ ಶಿಕ್ಷಣವನ್ನು ಪ್ರಾಯೋಜಿಸಲು ಮುಂದೆ ಬಂದಿದೆ. ಸಮಾರಂಭದ ಗೌರವ ಅತಿಥಿ ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಅವರು ಚೆಕ್ ಅನ್ನು ಕ್ರಿಸ್ಟೆಲ್ ಹೌಸ್‌ನ ಅಧ್ಯಕ್ಷ  ರಾಜು ಶಹಾನಿ ಅವರಿಗೆ ನೀಡಿದರು.
 
 ಕ್ರಿಸ್ಟೆಲ್ ಹೌಸ್, ಬಡ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ರಕ್ಷಣೆ ಹಾಗೂ ಉತ್ತಮ ಪರಿಸರವನ್ನು ಒದಗಿಸಲು ಶ್ರಮಿಸುತ್ತಿರುವ ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಫೋರಂ ಮಾಲ್‌ನ ಸಿಬ್ಬಂದಿ, ಮಳಿಗೆಗಳ ಮುಖ್ಯಸ್ಥರು, ನಿರ್ದೇಶಕ ಮಂಡಳಿ ಸದಸ್ಯರು ಹಾಜರಿದ್ದರು. ಕ್ರಿಸ್ಟೆಲ್ ಹೌಸ್‌ನ ಉತ್ಸಾಹಿ ಮಕ್ಕಳು ಈ ಸಮಾರಂಭದಲ್ಲಿ  ವಿವಿಧ ಕಾರ್ಯಕ್ರಮವನ್ನು ನಡೆಸಿಕೊಟ್ಟರು.     
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.