ADVERTISEMENT

‘ಭಜನಾ ಸಾಮ್ರಾಟ’ರ ಅಂತಿಮ ಸ್ಪರ್ಧೆ

ವಿದ್ಯಾಶ್ರೀ ಎಸ್.
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಅಧ್ಯಾತ್ಮದ ಭಾವಗಳನ್ನು ಮನದಾಳದಿಂದ ಸ್ಫುರಿಸುವ ಮಾಧ್ಯಮ ಭಜನೆ. ತನು–ಮನವನ್ನು ಇಲ್ಲಿ ತನ್ಮಯತೆಯಿಂದ ತೊಡಗಿಸಬೇಕು. ದೇವರನ್ನು ಸ್ತುತಿಸಲು ಬಳಸುವ ಭಜನೆ ಪ್ರಕಾರವನ್ನು ಜನಮನಕ್ಕೆ ಪ್ರಬಲವಾಗಿ ಆವಾಹಿಸುವ ಕೆಲಸ ಮಾಡುತ್ತಿರುವುದು ಶಂಕರ ವಾಹಿನಿ.

ಅಬ್ಬರ, ಆಡಂಬರ, ಮನರಂಜನೆಯ ರಿಯಾಲಿಟಿ ಶೋಗಳ ನಡುವೆ ವಾಹಿನಿ ಆರಂಭಿಸಿದ್ದ ‘ಭಜನ್ ಸಾಮ್ರಾಟ್ ಸೀಸನ್-–೨’ ಅಂತಿಮ ಘಟ್ಟಕ್ಕೆ ಬಂದಿದೆ. ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ನಗರದ ಅರಮನೆ ಮೈದಾನದ ರಾಯಲ್ ಸೆನೆಟ್ ಸಭಾಂಗಣದಲ್ಲಿ ಇದೇ ೨೧ರಂದು ನಡೆಯಲಿದೆ.

ಕಳೆದ ಜನವರಿಯಲ್ಲಿ ಚಾಲನೆ ಪಡೆದ ‘ಭಜನ್ ಸಾಮ್ರಾಟ್ ಸೀಸನ್–2’ರಲ್ಲಿ ತಂಡಗಳ (ಸ್ಪರ್ಧಿ) ಆಡಿಷನ್ ಕೊಯಮತ್ತೂರಿನಿಂದ ಪ್ರಾರಂಭವಾಗಿ ಮಂಗಳೂರಿನಲ್ಲಿ ಮುಕ್ತಾಯವಾಯಿತು.ದಕ್ಷಿಣ ಭಾರತದ ರಾಜ್ಯಗಳೊಂದಿಗೆ ಮುಂಬೈ ಸೇರಿದಂತೆ ೧೧ ಕೇಂದ್ರಗಳಲ್ಲಿ ವಾಹಿನಿ ಆಡಿಷನ್ಸ್ ನಡೆಸಿದ್ದು, ೨೪ ತಂಡಗಳು ಆಯ್ಕೆಯಾಗಿದ್ದವು. ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ೧೨ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ನಂತರ ಸೆಮಿಫೈನಲ್ ಕಣಕ್ಕೆ ಆಯ್ಕೆಯಾದ ಎಂಟು ತಂಡಗಳು ಮಾತೃಭಾಷೆಯ ಹೊರತಾಗಿ ಇತರ ಭಾಷೆಗಳ ಭಜನೆಗಳನ್ನು ಹಾಡಿದರು. ಈ ತಂಡಗಳಿಗೆ ಗುರು ಆಗಿದ್ದವರು ಕೈವಾರದಲ್ಲಿರುವ ಉಡಯಳೂರು ಕಲ್ಯಾಣ್ ರಾಮನ್ ಭಾಗವತರು. ಭಾಗವತರಿಂದ ತರಬೇತಿ ಪಡೆದ ಸ್ಪರ್ಧಿಗಳು ನಾಮಸಂಕೀರ್ತನಾ, ಪ್ರಾಚೀನ ಸಂಪ್ರದಾಯದ ಗೀತೆ ಮತ್ತು ಸಾಂಪ್ರದಾಯಿಕ ಭಜನೆಗಳ ಪಟ್ಟುಗಳನ್ನು ಹಾಡಿದರು. ಎಂಟು ತಂಡಗಳಲ್ಲಿ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಿವೆ.

ಹಾವೇರಿ ಜಿಲ್ಲೆ ಸವಣೂರು ಬಳಿಯ ಬಿಡ್ನಿ ಗ್ರಾಮದ ಮೊಹಮ್ಮದ್ ಗೌಸ್ ಎ.ಮೊಹೀನ್ ಸ್ವತಃ ರಚಿಸಿ ಹಾಡಿದ ‘ಶಿವನ ನಾಮ ಸಂಕೀರ್ತ’ವನ್ನು ಗ್ರಾಂಡ್ ಫಿನಾಲೆಯಲ್ಲಿ ಹಾಡುತ್ತಿರುವುದು ವಿಶೇಷ.

ಈ ತಂಡಗಳು ಇದೇ ೨೧ರಂದು ಅಂತಿಮ ಹಣಾಹಣಿಯಲ್ಲಿ ಮೊದಲ ಸ್ಥಾನಕ್ಕೆ ‘ಭಜನೆ’ ನಡೆಸಲಿವೆ. ‘ಭಜನ್ ಸಾಮ್ರಾಟ್ ಸೀಸನ್–೨’ ಗೆದ್ದವರು 10 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯುತ್ತಾರೆ. ಖ್ಯಾತ ಹಿನ್ನಲೆ ಗಾಯಕರಾದ ಕವಿತಾ ಕೃಷ್ಣಮೂರ್ತಿ, ಪೂರಣ್ ದಾಸ್ ಬಾಲ್, ಉಡಯಳೂರು ಭಾಗವತರು ತೀರ್ಪುಗಾರರು.

‘ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿಯ ಅಭಿರುಚಿಗಳನ್ನು ಬೆಳೆಸಬೇಕು. ವಿವಿಧ ವಯೋಮಾನ, ಅಭಿರುಚಿ, ಸಂವೇದನೆಗೆ ತಕ್ಕಂತೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಅಲ್ಪ ಅವಧಿಯಲ್ಲಿಯೇ ಕಾರ್ಯಕ್ರಮ ಜನಪ್ರಿಯತೆ ಪಡೆದುಕೊಂಡಿತು.  ಈ ಹಿಂದೆ ‘ಭಜನ್ ಸಾಮ್ರಾಟ್ ಸೀಸನ್-–೧’ಗೆ ಸಿಕ್ಕ ಜನಪ್ರಿಯತೆಯ ಕಾರಣದಿಂದ ಸೀಸನ್–-೨ ಪ್ರಾರಂಭಿಸಲು ಪ್ರೇರಣೆಯಾಯಿತು’ ಎನ್ನುತ್ತಾರೆ ಕಾರ್ಯಕ್ರಮದ ನಿರ್ದೆಶಕ ವೆಂಕಟೇಶ್.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT