ADVERTISEMENT

‘ಚಲೋ’ ರೊಮ್ಯಾಂಟಿಕ್ ಕಾಮಿಡಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
‘ಚಲೋ’ ರೊಮ್ಯಾಂಟಿಕ್ ಕಾಮಿಡಿ
‘ಚಲೋ’ ರೊಮ್ಯಾಂಟಿಕ್ ಕಾಮಿಡಿ   

ಗುಳಿಕೆನ್ನೆ ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಚಿತ್ರ ‘ಚಲೋ’ ನಿನ್ನೆಯಷ್ಟೇ (ಫೆ.2) ತೆರೆಕಂಡಿದೆ. ವೆಂಕಿ ಕುಡುಮುಲ ನಿರ್ದೇಶನದ ಮೊದಲ ಚಿತ್ರ ಇದು. ಕಾಲೇಜು ಯುವಕನ ಪಾತ್ರದಲ್ಲಿ ನಾಗ ಶೌರ್ಯ ಮಿಂಚಿದ್ದಾರೆ.

ತಮಿಳು ಹಾಗೂ ತೆಲುಗು ಭಾಷಿಕರ ನಡುವೆ ಹಂಚಿಕೆಯಾಗಿರುವ ‘ತಿರುಪುರಮ್‌’  ಗ್ರಾಮವೇ ಕಥೆಯ ಕೇಂದ್ರ. 1953ರಲ್ಲಿ ನಡೆದ ಘಟನೆಯನ್ನು ಆಧರಿಸಿ ಚಿತ್ರ ಹೆಣೆಯಲಾಗಿದೆ ಎನ್ನುವುದು ಚಿತ್ರತಂಡದ ವಿವರಣೆ. ಭಿನ್ನಭಾಷಿಕರು ತಾವೇ ನಿರ್ಮಿಸಿಕೊಂಡಿರುವ ಬೇಲಿಯನ್ನು ದಾಟುವುದು ದುಸ್ತರ ಎನಿಸಿದ ಸಂದರ್ಭದಲ್ಲಿ ಭಿನ್ನ ಭಾಷಿಕ ಯುವಕ–ಯುವತಿಯ ಪ್ರೀತಿ ಏನೆಲ್ಲಾ ಮೋಡಿ ಮಾಡುತ್ತದೆ ಎಂಬುದನ್ನು ಚಿತ್ರ ಹಾಸ್ಯದ ಲೇಪನದಲ್ಲಿ ಬಿಂಬಿಸುತ್ತದೆ.

‘ಕಿರಿಕ್ ಪಾರ್ಟಿ’ ಹುಡುಗಿ ಎಂದಿನಂತೆ ಮುದ್ದಾಗಿ ಕಾಣಿಸಿದ್ದರೆ, ನಾಗ ಶೌರ್ಯ ಕಾಮಿಡಿ, ರೊಮಾನ್ಸ್ ಮತ್ತು ಫೈಟಿಂಗ್‌ಗಳಲ್ಲಿ ಮಿಂಚಿದ್ದಾರೆ. ಮಹತಿ ಸ್ವರ ಸಾಗರ್ ಸಂಗೀತ ಸಂಯೋಜನೆಯ ಐದೂ ಹಾಡುಗಳು ಯುವಜನರಿಗೆ ಇಷ್ಟವಾಗುವಂತಿವೆ.

ADVERTISEMENT

‘ಚೂಸಿ ಚುಡಾಗನೆ ನಚ್ಚೇಸಾವೆ’ (ನೋಡಿದ ತಕ್ಷಣ ಇಷ್ಟವಾಗಿಬಿಟ್ಟೆ) ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಜನಪ್ರಿಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.