ADVERTISEMENT

ಬೆನ್ನು ನೋವಿಗೆ ಬ್ಯಾಕ್ ರೆಸ್ಟ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST
ಬ್ಯಾಕ್ ರೆಸ್ಟ್‌
ಬ್ಯಾಕ್ ರೆಸ್ಟ್‌   

ಬೈಕ್‌‌ನಲ್ಲಿ ಲಾಂಗ್ ಡ್ರೈವ್‌ ಹೋಗುವಾಗ ಹಾಗೂ ಹೆಚ್ಚಾಗಿ ಬೈಕ್‌ ಮೇಲೆ ಓಡಾಡುವಾಗ ಬೆನ್ನು ನೋವು ಬರುವುದು ಸಹಜ. ಹಾಗಾಗಿ ಆ ಸಮಸ್ಯೆಗೆ ಪರಿಹಾರವಾಗಿ ಬ್ಯಾಕ್ ರೆಸ್ಟ್‌ ತಯಾರಿಸಿದ್ದಾರೆ ಮೆಕಾನಿಕಲ್ ಎಂಜಿನಿಯರ್‌ ವಿಶ್ವಮೂರ್ತಿ.

ಬೆಂಗಳೂರಿಂದ ತುಮಕೂರಿಗೆ ಬೈಕ್ ಮೇಲೆ ಹೊರಟಾಗ, ಊರು ತಲುಪುವಷ್ಟರಲ್ಲಿ ವಿಪರೀತ ಬೆನ್ನು ನೋವು ಶುರುವಾಯಿತು. ಬೈಕ್ ಮೇಲೆ ಲಾಂಗ್ ಡ್ರೈವ್ ಮಾಡುವುದು ಬಿಡಬೇಕು ಎಂದುಕೊಂಡೆ. ಆದರೆ, ನನಗೆ ಲಾಂಗ್ ಡ್ರೈವ್ ಮಾಡುವುದೆಂದರೆ ತುಂಬಾ ಇಷ್ಟ. ಬೈಕ್ ರೈಡ್‌ ಮಾಡುವಾಗ ಈ ನೋವು ತಡೆಯಲು ಏನು ಮಾಡಬೇಕು ಎಂದು ಯೋಚಿಸಿ, ಸತತ ಪ್ರಯತ್ನ ಮಾಡಿ ಬ್ಯಾಕ್ ರೆಸ್ಟ್‌ ತಯಾರಿಸಿ ನನ್ನ ಅವೆಂಜರ್‌ ಬೈಕ್‌ಗೆ ಫಿಕ್ಸ್‌ ಮಾಡಿದ್ದೇನೆ ಎನ್ನುತ್ತಾರೆ ವಿಶ್ವಮೂರ್ತಿ.

ಏನಿದು ಬ್ಯಾಕ್ ರೆಸ್ಟ್‌:

ADVERTISEMENT

ಬೈಕ್‌ ಚಲಾಯಿಸುವಾಗ ಬೆನ್ನು ನೋವು ಬಾರದಂತೆ ಬೈಕ್ ಮಧ್ಯೆ ಬೆನ್ನಿಗೆ ಆಸರೆಯಾಗಲು ಬ್ಯಾಕ್‌ ರೆಸ್ಟ್‌‌ಗಳನ್ನು ಪ್ರತೇಕವಾಗಿ ಮಾಡಿಸಲಾಗುತ್ತಿತ್ತು. ಆದರೆ, ಅದರಿಂದ ಬೈಕ್ ಹತ್ತಿ ಇಳಿಯಲು ಸಮಸ್ಯೆಯೂ ಕೂಡ ಉಂಟಾಗುವ ಕಾರಣ ಬ್ಯಾಕ್ ರೆಸ್ಟನ್ನು ಯಾರು ಕೂಡ ಬೈಕ್‌ಗೆ ಅಳವಡಿಸಿಕೊಂಡಿರಲಿಲ್ಲ. ಹಾಗಾಗಿ ಆ ತೊಂದರೆಗೂ ಪರಿಹಾರ ಕಂಡುಹಿಡಿದು ಹೊಸ ರೀತಿಯ ವಿಶೇಷ ಬ್ಯಾಕ್‌ ರೆಸ್ಟ್‌ ತಯಾರಿಸುವ ಮೂಲಕ ಬೈಕ್ ಪ್ರಿಯರ ಗಮನ ಸೆಳೆದಿದ್ದಾರೆ.

ವಿಶೇಷತೆಗಳು :

ಬೈಕ್‌ನ ಎಡ ಭಾಗದಲ್ಲಿ ಬ್ಯಾಕ್ ರೆಸ್ಟ್‌ ಫಿಕ್ಸ್‌ ಮಾಡಿದ್ದು, ಅದನ್ನು ಕೆಳಗೆ ಮೇಲೆ ತಿರುಗಿಸಬಹುದು. ಅವಶ್ಯವಿದ್ದರೆ ಬೆನ್ನಿಗೆ ಆಸರೆಯಾಗಿ ಹಾಕಿಕೊಳ್ಳಬಹುದು. ಬೇಡವೆಂದರೆ ಇರುವ ಜಾಗದಲ್ಲೇ ಫಿಕ್ಸ್‌ ಮಾಡಬಹುದು. ಶಬ್ದ ಬಾರದ ಹಾಗೆ ಫಿಕ್ಸ್ ಮಾಡಲು ಲಾಕ್‌ ಕೂಡ ಹೊಂದಿದೆ. ಬೈಕ್ ಹಿಂದೆ ಕೂಡುವವರಿಗೂ ಸಮಸ್ಯೆಯಾಗುವುದಿಲ್ಲ. ಬೆನ್ನಿಗೆ ಇದು ಗೋಡೆಯ ಹಾಗೆ ಇರಬಾರದು ಎಂದು ಸ್ಪ್ರಿಂಗ್ ಕೂಡ ಹಾಕಿದ್ದೇನೆ. ಇದರ ಬಗ್ಗೆ ಕೇಳಿದವರಿಗೆನೀವೆ ಉಪಯೋಗಿಸಿ ನೋಡಿ ಎಂದು ಬೈಕ್ ಕೊಡುತ್ತೇನೆ ಎನ್ನುತ್ತಾರೆ ವಿಶ್ವಮೂರ್ತಿ.

ಯಾವ ಬೈಕ್‌ಗಳಿಗಾದರೂ ಇದನ್ನು ಸುಲಭವಾಗಿ ಫಿಕ್ಸ್ ಮಾಡಬಹುದು. ಮುಂದೆ ಈ ಬ್ಯಾಕ್ ರೆಸ್ಟ್‌‌ ಮಾರುಕಟ್ಟೆಗೆ ಬಿಡುವ ತಯಾರಿಯಲ್ಲಿದ್ದೇನೆ. ಇದು ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡುವ ಉದ್ದೇಶ ನನ್ನದು ಎನ್ನುತ್ತಾರೆ ಮೂರ್ತಿ. ಹೆಚ್ಚಿನ ಮಾಹಿತಿಗೆ– 81976 32922

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.