ADVERTISEMENT

ಸಿಸಿಡಿಯಲ್ಲಿ ಹೊಸ ಕಾಫಿ ಪರಿಮಳ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:45 IST
Last Updated 7 ಜನವರಿ 2020, 19:45 IST
ಹಿಮಾಲಯನ್ ಪಿಂಕ್ ಉಪ್ಪಿನ ರುಚಿ 
ಹಿಮಾಲಯನ್ ಪಿಂಕ್ ಉಪ್ಪಿನ ರುಚಿ    

ಕೆಫೆ ಕಾಫಿ ಡೇ (ಸಿಸಿಡಿ)ಹೊಸ ವರ್ಷದಲ್ಲಿ ಹೊಸದಾಗಿ ಆರು ಸ್ವಾದಗಳ ಕಾಫಿ ಪರಿಚಯಿಸಲಿದೆ.

ಕ್ಯಾಪುಚಿನೊ ಸರ್‌ಪ್ರೈಸ್‌, ಕ್ಯಾಪುಚಿನೊ ಕ್ರಶ್‌, ಕ್ಯಾಪುಚಿನೊ ಅನ್‌ವಿಂಡ್‌, ಕ್ಯಾಪುಚಿನೊ ಮಿಸ್ಚೀಫ್‌, ಕ್ಯಾಪುಚಿನೊ ರಿಚಾರ್ಜ್‌ ಮತ್ತು ಕ್ಯಾಪುಚಿನೊ ಅವೌಸಮ್ ಸ್ವಾದಗಳನ್ನು ಗ್ರಾಹಕರು ಮಾಗಿಯ ಚಳಿಯಲ್ಲಿ ಸವಿಯಬಹುದು.

ಬಟಾಣಿ ಹೂವಿನ ಸ್ವಾದ, ಹಿಮಾಲಯನ್ ಪಿಂಕ್ ಉಪ್ಪು, ಚಾಕೊಲೇಟ್‌ ಕ್ರೀಮ್‌, ಬಾಳೆಹಣ್ಣು, ಸಾಂಪ್ರದಾಯಿಕ ಆರೋಗ್ಯ ವರ್ಧಕಗಳಾದ ಅರಿಸಿನ, ಶುಂಠಿ, ಮೆಣಸು ಮತ್ತು ದಾಲ್ಚಿನ್ನಿ ಬಳಸಿ ಈ ಕಾಫಿಯ ಸ್ವಾದಗಳು ಕಾಫಿ ಪ್ರಿಯರಿಗೆ ಆಹ್ಲಾದಕರ ಅನುಭವ ನೀಡುತ್ತವೆ.ಹೊಸ ಸ್ವಾದದ ಪೇಯಗಳು ದೇಶದಾದ್ಯಂತ ಎಲ್ಲ ಸಿಸಿಡಿ ಮಳಿಗೆಗಳಲ್ಲಿ ಲಭ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.