ADVERTISEMENT

ನಾಳೆ ಐರ್ಲೆಂಡ್ ಶಿಕ್ಷಣ ಮೇಳ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:00 IST
Last Updated 28 ಫೆಬ್ರುವರಿ 2019, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಎಂ.ಜಿ. ರಸ್ತೆಯ ತಾಜ್ ವಿವಂತಾ ಹೋಟೆಲ್‌ನಲ್ಲಿ ಇದೇ 2ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಐರ್ಲೆಂಡ್‌ ಶಿಕ್ಷಣ ಮೇಳ ನಡೆಯಲಿದೆ

ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಐರ್ಲೆಂಡ್‌ ಅತ್ಯಂತ ಸೂಕ್ತ ನೆಲೆ ಎನ್ನುವುದನ್ನು ಮನಗಂಡಿದ್ದಾರೆ. ಎಜುಕೇಷನ್‌ ಇನ್‌ ಐರ್ಲೆಂಡ್‌ ದೇಶದ ಐದು ಪ್ರಮುಖ ನಗರಗಳಲ್ಲಿ ಹಲವು ಶಿಕ್ಷಣ ಮೇಳಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಐರ್ಲೆಂಡ್‌ನ ಪ್ರಮುಖ ವಿಶ್ವವಿದ್ಯಾನಿಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಂದು ಸೂರಿನಡಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಐರ್ಲೆಂಡ್‌ ಅತ್ಯಂತ ಬೇಡಿಕೆಯ ದೇಶವಾಗಿದೆ. ಅಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸೌಲಭ್ಯವಿದೆ. ಐರ್ಲೆಂಡ್ ಸುರಕ್ಷಿತ ದೇಶವಾಗಿದ್ದು, ಅಲ್ಲಿನ ಪ್ರಮುಖ 20 ಐರಿಷ್ ಉನ್ನತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಿಂದ ವಿದ್ಯಾರ್ಥಿಗಳನ್ನು ಸೆಳೆಯುವ ಗುರಿ ಹೊಂದಿವೆ. ಶಿಕ್ಷಣ ಮೇಳದಲ್ಲಿ ಉದ್ಯೋಗದ ಸಾಧ್ಯತೆಗಳು, ಪ್ರವೇಶ ಪ್ರಕ್ರಿಯೆಗಳು ಮತ್ತು ಸ್ಕಾಲರ್ ಶಿಪ್‌ಗಳ ಬಗ್ಗೆ ಚರ್ಚೆ ನಡೆಯಲಿದೆ.

ADVERTISEMENT

ಮಾಹಿತಿ ಮತ್ತು ನೋಂದಣಿಗಾಗಿ: http://www.educationirelandevents.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.