ADVERTISEMENT

ಕೇಸರಿಯಾದಲ್ಲಿ ಘೂಮರ್‌ ರಂಗು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:58 IST
Last Updated 24 ಸೆಪ್ಟೆಂಬರ್ 2019, 19:58 IST
ಕೇಸರಿಯಾ
ಕೇಸರಿಯಾ   

ರಾಜಸ್ಥಾನದ ವೈವಿಧ್ಯ ಖಾದ್ಯಗಳನ್ನು ಉಣಬಡಿಸುವ ಕೇಸರಿಯಾ ರೆಸ್ಟೋರೆಂಟ್‌ನಲ್ಲಿ ಘೂಮರ್‌ ಹಬ್ಬದ ಸಂಭ್ರಮ ಮನೆಮಾಡಲಿದೆ.

ಸಾಂಪ್ರದಾಯಿಕ ಹಬ್ಬದ ಸಂದರ್ಭದಲ್ಲಿ ರಾಜಸ್ಥಾನದವರೇ ಆದ ಶೆಫ್‌ ಮಿಖಾ ಸಿಂಗ್‌ ಅಪರೂಪದ ಖಾದ್ಯಗಳನ್ನು ತಯಾರಿಸಲಿದ್ದಾರೆ. ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 2ರವರೆಗೆ ಹಬ್ಬದ ಊಟ ಮಾಡುವ ಅವಕಾಶ ಸಿಗಲಿದೆ.

ರಾಜಸ್ಥಾನದಿಂದ ಬಂದಿರುವ ನೃತ್ಯಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಡೀನ್‌ ಮಹಮ್ಮದ್ ಅವರ ತಂಡ ನೃತ್ಯ ವೈಭವವನ್ನು ಕಟ್ಟಿಕೊಡಲಿದೆ. ರಾಜಸ್ಥಾನದ ಖಾದ್ಯಗಳನ್ನು ಸವಿಯುತ್ತ ನೃತ್ಯ ಆನಂದಿಸಬಹುದು.

ADVERTISEMENT

ದಾಲ್‌ ಭಾಟಿ ಚುರ್ಮಾ, ಘಟ್ಟ ಮಾಘೈ ಪುಲಾವ್‌ ಹಬ್ಬದ ಸಂದರ್ಭದ ವಿಶೇಷ ಅಡುಗೆಗಳಾಗಿವೆ. ಒಂದು ಊಟದ ತಟ್ಟೆಯಲ್ಲಿ 35ಕ್ಕಿಂತ ಹೆಚ್ಚು ವಿಭಿನ್ನ ಖಾದ್ಯಗಳನ್ನು ನೀಡಲಾಗುತ್ತದೆ. ಜಿಲೇಬಿ ರಸ್‌ಮಲೈ ಸ್ಯಾಂಡ್‌ವಿಚ್‌, ಕೇಸರಿಯಾ ಚೂಮರ್‌, ಪನ್ನೀರ್‌ ಶಿಮ್ಲಾಮಿರ್ಚಿ, ರಾಜಸ್ಥಾನಿ ಹರಿಯಾಲಿ ಸಬ್ಜಿ, ಚಿಕೂ ಹಲ್ವಾ ಕೂಡ ಲಭ್ಯ.

ಸ್ಥಳ–ಕೇಸರಿಯಾ ಸುವರ್ಣ ಮಹಲ್‌, ಗೇಟ್‌ ನಂ 55, ಗೋಯಂಕಾ ಚೇಂಬರ್ಸ್‌, 19ನೇ ಮುಖ್ಯ ರಸ್ತೆ, 15ನೇ ಕ್ರಾಸ್‌, 2ನೇ ಹಂತ, ಜೆ.ಪಿ.ನಗರ.

ಸಮಯ: ಮಧ್ಯಾಹ್ನ 12 ರಿಂದ 3, ರಾತ್ರಿ 7ರಿಂದ 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.