ADVERTISEMENT

ಪುರಂದರದಾಸರ ಸಂಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:00 IST
Last Updated 28 ಫೆಬ್ರುವರಿ 2019, 20:00 IST
ವಿಶ್ವಭೂಷಣ ತೀರ್ಥ ಶ್ರೀಪಾದ ಸ್ವಾಮೀಜಿ
ವಿಶ್ವಭೂಷಣ ತೀರ್ಥ ಶ್ರೀಪಾದ ಸ್ವಾಮೀಜಿ   

ಶ್ರೀದೇವಗಿರಿ ಲಕ್ಷ್ಮೀಕಾಂತ ಸಂಘ ಆಯೋಜಿಸಿರುವ 29ನೇ ವರ್ಷದ ಪುರಂದರದಾಸರ ಸಂಸ್ಮರಣೋತ್ಸವ ಇದೇ 6ರಂದು ಜಯನಗರ 8ನೇ ಬ್ಲಾಕ್‌ನ ಬೆಳಗೋಡು ಕಲಾ ಮಂಟಪದಲ್ಲಿ ನಡೆಯಲಿದೆ.

ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ಸಂಸ್ಮರಣೋತ್ಸವ ನಡೆಯಲಿದ್ದು, ರಾಮೋಹಳ್ಳಿ ಶ್ರೀ ಮಧ್ವನಾರಾಯಣ ಆಶ್ರಮದ ಸಂಸ್ಥಾಪಕ ವಿಶ್ವಭೂಷಣ ತೀರ್ಥ ಶ್ರೀಪಾದರು ಚಾಲನೆ ನೀಡುವರು.

ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಡಾ.ಅನಂ ತಪದ್ಮನಾಭ ರಾವ್, ಡಾ.ಸುಭಾಷ್ ಕಾಖಂಡಕಿ, ವೆಂಕಟೇಶಮೂರ್ತಿ, ಕಲ್ಲಾಪುರ ಗುರುರಾಜಾಚಾರ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಾರಂಭದಲ್ಲಿ ಪುರಂದರ ವಿಠಲ ಸೇವಾ ಟ್ರಸ್ಟ್-ಪುರಂದರಾಶ್ರಮದ ಹರಿವಿಠಲ ದಾಸರಿಗೆ ಸನ್ಮಾನ ನಡೆಯಲಿದೆ. ನಂತರ ಕೆ. ಅಪ್ಪಣ್ಣಾಚಾರ್ಯ ಅವರಿಂದ ಅನುಗ್ರಹ ವಚನ ಏರ್ಪಡಿಸಲಾಗಿದೆ.

ADVERTISEMENT

ದೇವಗಿರಿ ಲಕ್ಷ್ಮೀಕಾಂತ ಸಂಘದ ಅಧ್ಯಕ್ಷೆ ಜಿ.ವಿ ಶಾಂತಾಬಾಯಿ ಅವರ ಶ್ರೀಜಗನ್ನಾಥದಾಸರಿಂದ ವಿರಚಿತವಾದ ಶ್ರೀಹರಿಕಥಾಮೃತಸಾರ ತಾತ್ಪರ್ಯಾರ್ಥ: ಸ್ವಗತ ಸ್ವಾತಂತ್ರ್ಯ ಸಂಧಿ, ಸರ್ವಸ್ವಾತಂತ್ರ್ಯ ಸಂಧಿ, ಕರ್ಮ ವಿಮೋಚನ ಸಂಧಿ, ಗುಣತಾರತಮ್ಯ ಸಂಧಿ, ಬೃಹತ್ತಾರತಮ್ಯ ಸಂಧಿ ಸಕಲ ದುರಿತ ನಿವಾರಣ ಸಂಧಿ, ಸಿ.ಪಿ. ವೇದಾವತಿ ಅವರ ಕಥಾಮೃತಧಾರೆ, ಡಾ.ಸುಮನಾ ಬದ್ರಿನಾಥ್ ಅವರ ‘ದಾಸಸಾಹಿತ್ಯದಲ್ಲಿ ಲಕ್ಷ್ಮಿತತ್ವ’ ಮತ್ತು ಗೀತಾ ಕಶ್ಯಪ್ ಅವರ ಕವನ ಸಂಕಲನ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ.

ಡಾ.ರಾಜಲಕ್ಷ್ಮಿ ಪಾರ್ಥಸಾರಥಿ , ಡಾ.ಕುಮುದಾ ಗೋವಿಂದರಾವ್. ಡಾ.ರತ್ನಾ ಕೆ. ರಂಗನಾಥರಾವ್, ಡಾ.ಶಾಂತಾ ರಘೋತ್ತಮಾಚಾರ್, ಮಾಲತಿ ಮಾಧವಾಚಾರ್ ಮೊದಲಾದ ಮಹಿಳಾ ಹರಿದಾಸಿಣಿಯರಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಕಲ್ಲಾಪುರ ಪವಮಾನಾಚಾರ್, ಡಾ.ವಾಸುದೇವ ಅಗ್ನಿಹೋತ್ರಿ, ಡಾ.ಹ.ರಾ. ನಾಗರಾಜ್, ಪ್ರೊ.ರಾಮಚಂದ್ರ ಹೆಬ್ಬಣಿ, ಗುಂಡಾಚಾರ್, ಡಾ.ಪರಶುರಾಂ ಬೆಟಗೇರಿ, ಪ್ರಸನ್ನ ಭೂವರಹಾ ವಿಠಲದಾಸರು ಭಾಗವಹಿಸುವರು. ಸಂಜೆ ಡಾ.ವಿದ್ಯಾ ಕಸಬೆ ನೇತೃತ್ವದಲ್ಲಿ ‘ಗಿರಿಯಮ್ಮನವರ ಜೀವನ ಪರಿಚಯ’ ನಡೆಯಲಿದೆ. ದೇವಗಿರಿ ಲಕ್ಷ್ಮೀಕಾಂತ ಸಂಘ ನಡೆಸಿದ ಸಾಹಿತ್ಯಕ- ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ವಾರುಣಿ ಜಯತೀರ್ಥ ಬಹುಮಾನ ವಿತರಿಸುವರು. ನಂತರ ಶಾಂತಲಾ ನೃತ್ಯತಂಡದಿಂದ ಪುರಂದರ ನೃತ್ಯರೂಪಕ ಪ್ರದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ: 97418 40330

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.