ADVERTISEMENT

ಮಿಸ್ಟ್ರೆಸ್ ಇಂಡಿಯಾ ಗ್ರ್ಯಾಂಡ್‍ಮದರ್: ರ‍್ಯಾಂಪ್‌ ಮೇಲೆ ಹಿರಿಯರ ನಡಿಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 5:46 IST
Last Updated 22 ಸೆಪ್ಟೆಂಬರ್ 2019, 5:46 IST
ಮಿಸ್ಟ್ರೆಸ್ ಇಂಡಿಯಾ ಗ್ರ್ಯಾಂಡ್‍ಮದರ್ ಪ್ರಶಸ್ತಿಯನ್ನು ಪಡೆದ ಆರತಿ ಚಟ್ಲಾನಿ, ಮೊದಲ ಮತ್ತು ಎರಡನೇ ರನ್ನರ್ ಅಪ್ ಭಾರತಿ ಕಲ್ರೋ ಮತ್ತು ಹೇಮ ಸಚ್‍ದೇವ್
ಮಿಸ್ಟ್ರೆಸ್ ಇಂಡಿಯಾ ಗ್ರ್ಯಾಂಡ್‍ಮದರ್ ಪ್ರಶಸ್ತಿಯನ್ನು ಪಡೆದ ಆರತಿ ಚಟ್ಲಾನಿ, ಮೊದಲ ಮತ್ತು ಎರಡನೇ ರನ್ನರ್ ಅಪ್ ಭಾರತಿ ಕಲ್ರೋ ಮತ್ತು ಹೇಮ ಸಚ್‍ದೇವ್   

ಉದ್ದ ಗೌನ್‌ ತೊಟ್ಟು, ಚಂದದ ಮೇಕಪ್‌ ಮಾಡಿಕೊಂಡು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಅವರ ಆತ್ಮವಿಶ್ವಾಸವು ಅವರ ಅಂದವನ್ನು ಇಮ್ಮಡಿಗೊಳಿಸಿತ್ತು. ನಗುತ್ತಾ, ಬಳುಕುತ್ತಾ ವೇದಿಕೆಯಲ್ಲಿ ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದರೆ, ಅವರು 45ರಿಂದ 70 ವರ್ಷದೊಳಗಿನವರು ಎಂದು ನೋಡುಗರಿಗೆ ಅನಿಸಲೇ ಇಲ್ಲ.

ಮೊದಲ ಬಾರಿಗೆ ನಗರದಲ್ಲಿ ಮಿಸ್ಟ್ರೆಸ್ ಇಂಡಿಯಾ ಗ್ರ್ಯಾಂಡ್‍ಮದರ್ ಸ್ಪರ್ಧೆಯನ್ನು ಸಾಯಿ ಎಂಟರ್‌ಟೇನ್‌ಮೆಂಟ್ ಫ್ಯಾಕ್ಟರಿ ಏರ್ಪಡಿಸಿತ್ತು.

ಗೋಲ್ಡ್ ಕಾಯಿನ್ಸ್ ಕ್ಲಬ್ ಮತ್ತು ರೆಸಾರ್ಟ್‍ನಲ್ಲಿ 45 ರಿಂದ 70 ವರ್ಷದೊಳಗಿನ ಅಜ್ಜಿಯಂದಿರಿಗೆ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಆರತಿ ಚಟ್ಲಾನಿ ಅವರು ಮಿಸ್ಟ್ರೆಸ್ ಇಂಡಿಯಾ ಗ್ರ್ಯಾಂಡ್‍ಮದರ್ ಪ್ರಶಸ್ತಿಯನ್ನು ಪಡೆದುಕೊಂಡರೆ, ಭಾರತಿ ಕಲ್ರೋ ಮತ್ತು ಹೇಮ ಸಚ್‍ದೇವ್ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ADVERTISEMENT

‌ಅಜ್ಜಿಯಂದಿರಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಒಂದು ಅವಕಾಶವನ್ನು ಇಲ್ಲಿ ಒದಗಿಸಲಾಗಿತ್ತು.

ಸಿಂಗಪುರದ ಅನಿವಾಸಿ ಭಾರತೀಯರೊಬ್ಬರು ಸೇರಿದಂತೆ ದೇಶಾದಾದ್ಯಂತ 100ಕ್ಕೂ ಹೆಚ್ಚು ಅಜ್ಜಿಯಂದಿರು ಈ ಸ್ಪರ್ಧೆಗೆ ನೋಂದಣಿ ಮಾಡಿಸಿಕೊಂಡು ಪಾಲ್ಗೊಂಡಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಗೋಲ್ಡ್ ಕಾಯಿನ್ಸ್ ರೆಸಾರ್ಟ್‍ನಲ್ಲಿ ನಡೆದ ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಅಂತಿಮ ಸ್ಪರ್ಧೆಗೆ 19 ಜನರನ್ನು ಆಯ್ಕೆ ಮಾಡಲಾಗಿತ್ತು.

ವಿಜೇತರಿಗೆ ಗೋಲ್ಡ್ ಕಾಯಿನ್ ರೆಸಾರ್ಟ್‍ನ ₹ 4.5 ಲಕ್ಷ ರೂಪಾಯಿ ಮೌಲ್ಯದ ಸದಸ್ಯತ್ವ, ಮೊದಲ, ಎರಡನೇ ರನ್ನರ್ ಅಪ್‍ಗೆ ರಾಜ್ ಡೈಮಂಡ್ಸ್‌ನಿಂದ ಚಿನ್ನದ ಆಭರಣ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.