ADVERTISEMENT

ನಮ್ಮ ನಡುವಿನ ನಿಜವಾದ ‘ಹೀರೊ’ಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 19:45 IST
Last Updated 4 ಸೆಪ್ಟೆಂಬರ್ 2019, 19:45 IST
ರೆಮೊ
ರೆಮೊ   

ತೆರೆಯ ಮರೆಯಲ್ಲಿದ್ದುಕೊಂಡು ಸಾವಿರಾರು ವಿದ್ಯಾರ್ಥಿಗಳನ್ನು ‘ಹೀರೊ’ಗಳನ್ನಾಗಿ ರೂಪಿಸುವ ಶಿಕ್ಷಕರು ನಮ್ಮ ನಿಜವಾದ ಹೀರೊಗಳು. ದೇಶದ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಇಂಥ ಅನೇಕ ಹೀರೊಗಳ ಬೆನ್ನ ಹಿಂದಿನ ‘ರಿಯಲ್‌ ಹೀರೊ’ಗಳನ್ನುಗುರುತಿಸುವ ಕೆಲಸವನ್ನು ಸೋನಿ ವೈಎವೈ ಸಂಸ್ಥೆ ಮಾಡುತ್ತಿದೆ.

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿಸೋನಿ ವೈಎವೈ ಸಂಸ್ಥೆ ‘ಹೀರೊಸ್‌ ಬಿಹೈಂಡ್‌ ಹೀರೊಸ್‌’ ಅಭಿಯಾನದ ಅಡಿ ನೃತ್ಯ, ಸಂಗೀತ, ಕ್ರೀಡೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಿದೆ.

ಹೆಸರಾಂತ ಕೋರಿಯೋಗ್ರಾಫರ್‌ ರೆಮೊ ಡಿಸೋಜಾ,ಡಿವೈನ್‌ ಹೆಸರಿನಿಂದ ಮನೆಮಾತಾಗಿರುವ ಭಾರತೀಯ ರ‍್ಯಾಪರ್‌ ವಿವಿಯನ್‌ ಫರ್ನಾಂಡಿಸ್‌, ಚಿತ್ರನಿರ್ದೇಶಕ ಮಹೇಶ್‌ ಭಟ್‌, ಮಾಜಿ ಕ್ರಿಕೆಟಿಗ ದಿಲಿಪ್‌ ವೆಂಗಸರ್ಕರ್‌,ಕ್ರಿಕೆಟ್ ಕೋಚ್ ದಿನೇಶ್ ಲಾಡ್‌, ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೆಲಾ ಗೋಪಿಚಂದ,ಮುಂಬೈ ಕಡಲ ಕಿನಾರೆಗಳ ಸ್ವಚ್ಛತಾ ಆಂದೋಲನದ ರೂವಾರಿ ಅರ್ಪೋಜ್‌ ಖಾನ್‌, ‘ಮೇಕ್‌ ಲವ್‌ ನಾಟ್‌ ಸ್ಕಾರ್ಸ್‌’ ಎನ್‌ಜಿಒ ಸಂಸ್ಥಾಪಕಿ ರಿಯಾ ಶರ್ಮಾ ಅವರನ್ನು ಗೌರವಿಸಲಾಯಿತು.⇒v

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.