ADVERTISEMENT

ದಾಸನಪುರದಲ್ಲಿ ವೈಕುಂಠ ಏಕಾದಶಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:00 IST
Last Updated 16 ಡಿಸೆಂಬರ್ 2018, 20:00 IST
   

ದಾಸನಪುರದ ಶ್ರೀರಾಮಾನುಜ ಪೀಠಂ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 5ಕ್ಕೆ ಸುಪ್ರಭಾತ, ಅಭಿಷೇಕ, ಪೂಲಂಗಿ ಅಲಂಕಾರ, ಶ್ರೀರಾಮಾನುಜ ವೇದ ಆಗಮ ಪಾಠಶಾಲೆಯ ಆಚಾರ್ಯರು ಮತ್ತು ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ, 7ಕ್ಕೆ ಭೂನೀಳಾ ಸಮೇತ ಶ್ರೀನಿವಾಸ ಸ್ವಾಮಿಯ ಉತ್ಸವ, ಶ್ರೀನಿವಾಸ ಭಜನಾ ಮಂಡಳಿಯಿಂದ ಆಂಡಾಳ್ ಗೋಷ್ಠಿ, 8.30ಕ್ಕೆ ಅನುಜ್ಞೆ, ಋತ್ವಿಕಾವರಣ, ವಿಶ್ವಕ್ಷೇನ ಪೂಜೆ, ಪುಣ್ಯಾಹ, ಅನಿರ್ವಾಣ, ದೀಪಾರೋಹಣ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ದ್ವಾರ – ಧ್ವಜಕುಂಭದೇವತಾ ಪೂಜೆ, ಸಾಮೂಹಿಕ ಭಜನೆ.

10ಕ್ಕೆ ರಾಗಸಂಗಮ ಸಂಕೀರ್ತನ ತಂಡದಿಂದ ಭಜನೆ, 10.30ಕ್ಕೆ ಆಚಾರ್ಯ ಗುರುಪರಂಪರಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ, 11.30ಕ್ಕೆ ಪಾಂಡುರಂಗ ಭಜನಾ ಮಂಡಳಿಯಿಂದ ಹರಿನಾಮ ಸಂಕೀರ್ತನೆ, 12.30ಕ್ಕೆ ಗೋವಿಂದ ನಾಮಾವಳಿ,

ADVERTISEMENT

ಮಾಹಿತಿಗೆ 9845540549/ 9448266394

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.