ADVERTISEMENT

ಕಾಂಕ್ರೀಟ್ ಮಿಶ್ರಣ ಹೇಗೆ?

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST

ಮನೆ ನಿರ್ಮಿಸಲು ಹೊರಟಾಗ ನಿರ್ಮಾಣ ಹಂತದಲ್ಲಿ ಮುಖ್ಯವಾದ ಕಾಂಕ್ರೀಟ್ ಮಿಶ್ರಣದ ಬಗ್ಗೆ ತಿಳಿದುಕೊಳ್ಳಲೇಬೇಕು. ವಿವಿಧ ವಿಭಾಗಗಳ ನಿರ್ಮಾಣ ಕಾಮಗಾರಿಯಲ್ಲಿ  ಬಳಸುವ ಕಾಂಕ್ರೀಟ್‌ನ ಮಿಶ್ರಣ ಹೇಗೆ?

ಮೊದಲಿಗೆ ಭೂಮಿ ಆಗೆದು ತಳಪಾಯ ನಿರ್ಮಿಸಲು ಮುಂದಾಗುತ್ತೇವೆ. ಸಾಂಪ್ರದಾಯಿಕ ಶೈಲಿ ತಳಪಾಯವಾಗಿದ್ದಲ್ಲಿ ಮೊದಲು ಮಟ್ಟಸವಾದ ಸಿಮೆಂಟ್ ಕಾಂಕ್ರೀಟ್ ಬೆಡ್ ಹಾಕಿಕೊಳ್ಳಬೇಕು. ನಂತರ ಕಲ್ಲಿನ ಕಟ್ಟಡ, ಮೇಲೆ ಮತ್ತೊಂದು ಕಾಂಕ್ರೀಟ್ ಬೆಡ್. ನಂತರ ಗೋಡೆ, ಸಜ್ಜಾ, ತಾರಸಿ. ಕಡೆಗೆ ಸಿಮೆಂಟ್ ಪ್ಲಾಸ್ಟರಿಂಗ್.

ತಳಪಾಯದ ಬೆಡ್‌ಗೆ ಬೇಕಾದ ಕಾಂಕ್ರೀಟ್‌ಗೆ 1 ಬಾಂಡಲಿ ಸಿಮೆಂಟ್: 4 ಬಾಂಡಲಿ ಮರಳು: 8 ಬಾಂಡಲಿ ಜಲ್ಲಿ ಮಿಶ್ರಣ ಮಾಡಿಕೊಳ್ಳಬೇಕು.

ತಳಪಾಯದ ಕಲ್ಲಿನ ಕಟ್ಟಡದ ಗಾರೆಗೆ 1 ಬಾಂಡಲಿ ಸಿಮೆಂಟ್‌ಗೆ 6 ಬಾಂಡಲಿ ಮರಳಿನ ಮಿಶ್ರಣ ಅಗತ್ಯ. ಮೇಲೆ ಮತ್ತೆ 4 ಇಂಚಿನ ಬೆಡ್ ಹಾಕಬೇಕು. ಅದಕ್ಕೆ 1: 3: 6 ಪ್ರಮಾಣದಲ್ಲಿ ಸಿಮೆಂಟ್-ಮರಳು-ಜಲ್ಲಿ ಬೆರೆಸಿಕೊಳ್ಳಬೇಕು.

ಗೋಡೆ ಕಟ್ಟಲು ಮತ್ತು ಪ್ಲಾಸ್ಟರಿಂಗ್ ಗಾರೆಗೆ 1: 6 ಪ್ರಮಾಣದ ಸಿಮೆಂಟ್-ಮರಳು (ಇವೆಲ್ಲಕ್ಕೂ ಘನ ಅಡಿ ಲೆಕ್ಕದಲ್ಲಿ ಶೇ. 0.5ರಷ್ಟು ನೀರು ಅಗತ್ಯ).

ಸಜ್ಜಾ, ತಾರಸಿ ಹಾಗೂ ಬೀಮ್-ಪಿಲ್ಲರ್ ನಿರ್ಮಿಸಲು 1: 1.5: 3 ಲೆಕ್ಕದಲ್ಲಿ ಸಿಮೆಂಟ್-ಮರಳು-ಜಲ್ಲಿ ಮಿಶ್ರಣ ಅಗತ್ಯ. ಈ ಎಲ್ಲ ವಿವರ ನೀಡಿದವರು ಸ್ಟ್ರಕ್ಚರಲ್ ಎಂಜಿನಿಯರ್ ಶಾವಲಿ. ಇವರು ಬೆಂಗಳೂರಿನ ಸಿಬಿಐ ರಸ್ತೆ ಪ್ಯಾರಮೌಂಟ್ ಸ್ಟ್ರಕ್ಟರಲ್ ಕನ್‌ಲ್ಟೆಂಟ್‌ನ ಉದ್ಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.